ಶಿರಸಿ : ಮಡಿವಾಳ ಸಮಾಜವನ್ನು ಪರಿಶಿಷ್ಠ ಜಾತಿಗೆ ಸೇರಿಸುವ ಕುರಿತು ತಾಲೂಕಾ ಮಟ್ಟದಲ್ಲಿ ಪ್ರತಿಭಟನೆ ಹಾಗೂ ತಾಲೂಕಿನ ತಹಶೀಲದಾರರಿಗೆ ಸಹಾಯಕ ಆಯುಕ್ತರಿಗೆ ಅ.9 ರಂದು ವ್ಮೆರವಣಿಗೆಯ ಮೂಲಕ ಮನವಿ ಸಲ್ಲಿಸುವರು.

ಹಲವಾರು ಸಲ ಬೇಡಿಕೆ ಸಲ್ಲಿಸಿದ್ದರೂ ಕಾರ್ಯ ಆಗದೆ ಇರುವ್ಯದರಿಂದ 2014ರ ಜ.1ರಂದು ಬೆಂಗಳೂರಿನ ನ್ಯಾಶನಲ್ ಕಾಲೇಜ ಮೈದಾನದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಲಾಗಿತ್ತು. ಅಂದು ಸಮಾಜ ಕಲ್ಯಾಣ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯ ಉಗ್ರಪ್ಪನವರು ಬೆಂಬಲ, ಸೂಚಿಸಿದ್ದರೂ, ಅಲ್ಲದೇ 2016ರ ಫೆ.1ರಂದು ಕೂಡಲಸಂಗಮದಲ್ಲಿ ನಡೆದ ಅಧಿವೇಶನದಲ್ಲಿ ಮನವಿ ನೀಡಲಾಗಿತ್ತು. ಆದರೂ ಇಂದಿನವರೆಗೂ ಕೇಂದ್ರಕ್ಕೆ ಶಿಫಾರಸ್ಸು ಮಾಡಿಲ್ಲ
ಹೀಗಾಗಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಸಮಾನತೆಗಾಗಿ ಪ್ರತಿಭಟನೆ ನಡೆಸಲಾಗುತ್ತಿದೆ.

RELATED ARTICLES  ಮನೆಯ ಜಗುಲಿಯಲ್ಲಿ ಮಲಗಿದ್ದ ವೇಳೆ ಚಿರತೆ ದಾಳಿ

ಸ್ವಾತಂತ್ರ್ಯ ನಂತರ ವಿದ್ಯಾಧರ ಗುರೂಜಿ ಹಾಗೂ ಎನ್. ಶಂಕ್ರಪ್ಪ ಹೊರತು ಪಡಿಸಿ ಯಾರಿಗೂ ರಾಜಕೀಯ ಪ್ರಾತಿನಿಧ್ಯ ಸಿಗಲಿಲ್ಲ. ಈಗ ಜಿ.ಡಿ ಗೋಪಾಲ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿದ್ದಾರೆ
ಹೀಗಾಗಿ ನಮ್ಮ ರಾಜ್ಯದಲ್ಲೂ ನಮ್ಮ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಉಳಿದ ರಾಜ್ಯಗಳಂತೆ ಸಾಂವಿಧಾನಿಕ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಆಚರಣೆ. : ಮಹಾತ್ಮರ ಬದುಕಿನ ಕೆಲವು ಅಂಶಗಳು ನಮ್ಮೊಳಗೆ ಮೈಗೂಡಿದರೆ ನಮ್ಮ ಬದುಕೂ ಸುಂದರ : ನಾಗರತ್ನಾ ನಾಯಕ