ಹಾಸನ: ಹೊಳೆನರಸೀಪುರ ತಾಲೂಕಿನ ಪರಸನಹಳ್ಳಿ ಗ್ರಾಮದಲ್ಲಿ ಕಾವ್ಯ (25) ಎಂಬ ಮಹಿಳೆಯನ್ನು ಕೊಲೆ ಮಾಡಿ, ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿದ್ದ ಪ್ರಕರಣದ ಆರೋಪಿ ಅವಿನಾಶ್ ಎಂಬ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಬಿಎಂ ಓದಿರುವ ಕಾವ್ಯ ಕೆಲವು ವರ್ಷಗಳ ಹಿಂದೆ ಅಕ್ಷಯ್ ಎಂಬ ಯುವಕನನ್ನು ಮದುವೆಯಾಗಿ, ಸಂಸಾರದಲ್ಲಿ ಹೊಂದಾಣಿಕೆಯಾಗದ ಕಾರಣದಿಂದ ಕಾನೂನು ಪ್ರಕಾರ ಗಂಡನಿಗೆ ವಿಚ್ಚೇದನ ನೀಡಿದ್ದಳು. ನಂತರ ತಾಲೂಕಿನ ಹಳೇಕೋಟೆ ಹೋಬಳಿಯ ಪರಸನಹಳ್ಳಿ ಗ್ರಾಮದ ಅವಿನಾಶ್ ಜತೆಯಲ್ಲಿ ಕಳೆದ ಒಂದೂವರೆ ವರ್ಷದಿಂದ (ಲಿವಿಂಗ್ ಟುಗೆದರ್) ವಾಸವಾಗಿದ್ದರು.

RELATED ARTICLES  ಭ್ರಷ್ಟಾಚಾರ : ಐದು ಅಧಿಕಾರಿಗಳ ಮೇಲೆ ಎಸಿಬಿ ಅಧಿಕಾರಿಗಳ ದಾಳಿ.

ಕಾವ್ಯ ಅವರ ತಾಯಿ ಮಾತನಾಡಿ, ಕಾವ್ಯ ನಮಗೆ ವಾಯ್ಸ್ ರೆಕಾರ್ಡ್ ಮೂಲಕ ಮೆಸೇಜ್ ಮಾಡುತ್ತಿದ್ದರು. ಇತ್ತೀಚೆಗೆ ಹಣ ಕೇಳಿದ ಕಾರಣ 15 ಸಾವಿರ ರೂ. ಕಳುಹಿಸಲಾಗಿತ್ತು. ಆದರೆ ನ. 25 ರ ನಂತರ ಯಾವುದೇ ಮೆಸೇಜ್ ಬಾರದ ಕಾರಣ ಅನುಮಾನದಿಂದ ನಗರ ಪೊಲೀಸ್ ಠಾಣೆಯಲ್ಲಿ ಅವಿನಾಶ್ ಮತ್ತು ಅವರ ತಂದೆ, ತಾಯಿ ವಿರುದ್ಧ ದೂರು ನೀಡಲಾಗಿತ್ತು ಎಂದು ತಿಳಿಸಿದರು.

RELATED ARTICLES  ಕಾಯಿಲೆ ಬಿದ್ದ ಬಾಕ್ಸರ್ ಗೆ ಕಿಂಗ್ ಖಾನ್ ಸಹಾಯ ಹಸ್ತ… ಹೃದಯ ವೈಶಾಲ್ಯತೆ ಮೆರೆದ ಶಾರುಖ್

ಪ್ರಕರಣ ಸಂಬಂಧ ಅವಿನಾಶನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿ, ಕಬ್ಬಿನ ಗದ್ದೆಯಲ್ಲಿ ಹೂತಿದ್ದ ಮೃತದೇಹವನ್ನು ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಉಪಸ್ಥಿತಿಯಲ್ಲಿ ಹೊರತೆಗೆದಿದ್ದರು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.