ಭಟ್ಕಳ: ಮೀನು ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಟ್ಟಳ್ಳಿ ಬೈಪಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತ ಬೈಕ್ ಸವಾರರನ್ನು ಲೋಕೇಶ ವಿ. ನಾಯ್ಕ ಶೇಖರ ಸುಬ್ರಹ್ಮಣ್ಯ ನಾಯ್ಕ ಎಂದು ಗುರುತಿಸಲಾಗಿದೆ.

ಹೊನ್ನಾವರ ಮೂಲದ ಮೀನು ಲಾರಿ ಚಾಲಕ ರವಿ ಸುಂದರ ಭೋವಿ ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷಿತನದಿಂದ ಚಲಾಯಿಸಿಕೊಂಡು ಬಂದು ಭಟ್ಕಳ ಕಡೆಗೆ ಹೋಗುತ್ತಿದ್ದ ಶೇಖರ ನಾಯ್ಕನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಾರಿ ರಸ್ತೆಯ ಮೇಲೆ
ಪಲ್ಟಿಯಾಗಿದೆ. ಈ ಕುರಿತು ಮೀನು ಲಾರಿ ಚಾಲಕ ರವಿ ಸುಂದರ ಭೋವಿ ವಿರುದ್ಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಮಾತೃತ್ವ ಗೌರವಿಸುವುದು ಸಮಾಜದ ಕರ್ತವ್ಯ: ರಾಘವೇಶ್ವರ ಶ್ರೀ

ಇದನ್ನೂ ಓದಿ.

RELATED ARTICLES  ಭೀಕರ ಅಪಘಾತ : ಓರ್ವ ಸ್ಥಳದಲ್ಲಿಯೇ ಸಾವು.