ಉ.ಕ : ಕಳೆದ ಮೂರು- ನಾಲ್ಕು ದಿನಗಳಿಂದ ಮಾಂಡೋಸ್ ಚಂಡಮಾರುತದ ಪ್ರಭಾವದಿಂದ ಜಿಲ್ಲೆಯ ವಿವಿಧ ತಾಲೂಕಿನಾದ್ಯಂತ ತುಂತುರು ಮಳೆ ಸುರಿಯುತ್ತಿದ್ದು, ಬುಧವಾರ ಸಂಜೆ ಹೊತ್ತಿಗೆ ಅಂಕೋಲಾ ಹೊನ್ನಾವರ ಹಾಗೂ ಇತರ ತಾಲೂಕಿನಲ್ಲಿ ಭಾರಿ ಮಳೆ ಆರ್ಭಟಿಸಿದೆ.

ಮಾಂಡೋಸ್ ಮಳೆಯಿಂದಾಗಿ ಗೇರು ಬೆಳೆದ ರೈತರು ಕೂಡ ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ ಗೇರು ನೆಡುತೋಪಿನಲ್ಲಿ ಈಗಾಗಲೇ ಗೇರು ಮರಗಳಿಗೆ ಹೂ ಬಿಟ್ಟಿದ್ದ ಪರಿಣಾಮ ಹೂಗಳು ಮಳೆಗೆ ಉದುರಿ ಹೊಗುತ್ತಿದೆ. ಇದು ರೈತರ ಮೇಲೆ ಭಾರಿ ಬರೆ ಬೀಳುವಂತಾಗಿದೆ.

RELATED ARTICLES  ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಅಂಕೋಲಾದ ಶಾಂತರಾಮ ನಾಯಕ, ಹಿಚಕಡ ಆಯ್ಕೆ.

ಮಾಂಡೋಸ್ ಚಂಡಮಾರುತದ ಪ್ರಭಾವದ ಅಕಾಲಿಕ ಮಳೆಯು ತಾಲೂಕಿನ ಬೆಳೆಗಾರರ ನೆಮ್ಮದಿ ಕಸಿದಿದೆ. ಈ ಬಾರಿ ಅತಿಯಾದ ವರುಣನ ಅಬ್ಬರಕ್ಕೆ ಒಂದು ತಿಂಗಳು ತಡವಾಗಿ ಕೃಷಿ ಪ್ರಕ್ರಿಯೆಗಳು ಪ್ರಾರಂಭವಾಯಿತು. ಪ್ರವಾಹ ಮತ್ತು ಮಳೆಯೂ ಕಾಡಿದ್ದರಿಂದ ಸಾಗುವಳಿಗೆ ಕೊಂಚ ಹಿನ್ನಡೆಯೂ ಆಗಿತ್ತು. ಈಗ ಮತ್ತೆ ಮಳೆಯು ತನ್ನ ಆರ್ಭಟದಿಂದ ಇನ್ನಿತರ ಬೆಳೆಗಳಿಗೂ ಮಾರಕವಾಗುವಂತೆ ಕಾಣುತ್ತಿದೆ.

RELATED ARTICLES  ಪುಸ್ತಕಗಳೇ ನಿಜವಾದ ಸಂಗಾತಿ : ಝಮೀರುಲ್ಲಾ ಷರೀಫ್