ಕುಮಟಾ: ಕರ್ನಾಟಕ ರಾಜ್ಯ ಸರ್ಕಾರಿ ಎನ್. ಪಿ. ಎಸ್. ನೌಕರರ ಸಂಘ (ರಿ) ಬೆಂಗಳೂರು ಇದರ ಉತ್ತರ ಕನ್ನಡ ಜಿಲ್ಲಾ ಘಟಕದ ಸದಸ್ಯರು ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಪಡಿಸುವಂತೆ ಕೋರಿ ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ನೌಕರರು ಶಾಸಕರನ್ನು ಭೇಟಿಯಾಗಿ ಎಪ್ರಿಲ್ 1 2006 ರಿಂದ ಸರ್ಕಾರಿ ಸೇವೆಗೆ ಸೇರ್ಪಡೆಯಾದ ನೌಕರರಿಗೆ ಜಾರಿಗೊಳಿಸಿರುವ ರಾಷ್ಟ್ರೀಯ ಪಿಂಚಣಿ ಯೋಜನೆ ಎನ್.ಪಿ.ಎಸ್ ಅನ್ನು ರದ್ದುಪಡಿಸಿ, ಈ ಹಿಂದೆ ಇದ್ದಂತೆ ನಿಶ್ಚಿತ ಪಿಂಚಣಿ ಯೋಜನೆಯನ್ನು ಮರುಜಾರಿಗೆ ತರುವಂತೆ ಪ್ರಸ್ತುತ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಆಗ್ರಹಿಸುವಂತೆ ಶಾಸಕರಲ್ಲಿ ಮನವಿ ಸಲ್ಲಿಸಿದರು.

RELATED ARTICLES  ಇಂದೂ ಮುಂದುವರಿಯುತ್ತಾ ಕೊರೋನಾ ಆರ್ಭಟ..? ಉತ್ತರ ಕನ್ನಡದಲ್ಲಿ 45 ಕ್ಕೂ ಹೆಚ್ಚು ಪಾಸಿಟೀವ್..? ಬುಲೆಟಿನ್ ಗಾಗಿ ಕಾದಿರುವ ಜನರು..!

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘದ ತಾಲೂಕು ಅಧ್ಯಕ್ಷ ವಿ. ಎ. ಪಟಗಾರ ಹಾಗೂ ಸದಸ್ಯರಾದ ಶಿವಾನಂದ ಹಳ್ಳೊಳ್ಳಿ, ಅಣ್ಣಯ್ಯ, ಆನಂದು ನಾಯ್ಕ, ಚಂದ್ರಶೇಖರ ನಾಯ್ಕ,ವಿನೋದ, ತಾರಾ ನಾಯ್ಕ ಮತ್ತು ಕಂದಾಯ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ನೌಕರರು ಇದ್ದರು.

RELATED ARTICLES  ಕುಮಟಾದಲ್ಲಿ ಪ್ರಾರಂಭಗೊಂಡಿತು ಜನೌಷಧಿ ಕೇಂದ್ರ:ಅತ್ಯಲ್ಪ ಬೆಲೆಗೆ ಜನತೆಗೆ ಸಿಗಲಿದೆ ಉತ್ತಮ ಗುಣಮಟ್ಟದ ಔಷಧಗಳು.