ಕುಮಟಾ: ಅಂಕೋಲಾದಲ್ಲಿ ನಡೆದ ೨೦೨೨-೨೩ನೇ ಸಾಲಿನ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿವಿಎಸ್‌ಕೆ ಪ್ರೌಢಶಾಲಾ ವಿದ್ಯಾರ್ಥಿಗಳು ಅಮೋಘ ಸಾಧನೆಗೈದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡ ಭಾಷಣದಲ್ಲಿ ಭೂಮಿಕಾ ಭಟ್ಟ, ಕೊಂಕಣಿ ಭಾಷಣದಲ್ಲಿ ಶ್ರೀನಿವಾಸ ಶಾನಭಾಗ, ಧಾರ್ಮಿಕ ಪಠಣದಲ್ಲಿ ವೈಷ್ಣವಿ ಹೆಗಡೆ, ಗಝಲ್‌ನಲ್ಲಿ ಶ್ರೇಯಾ ಹೆಬ್ಬಾರ ಇವರು ಪ್ರಥಮ ಸ್ಥಾನ ಗಳಿಸುವುದರ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಶಾಲೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಚಿತ್ರಕಲೆಯಲ್ಲಿ ಭರತ ನಾಯಕ ದ್ವಿತೀಯ ಸ್ಥಾನ ಪಡೆದರೆ, ಆಶುಭಾಷಣದಲ್ಲಿ ಸ್ನೇಹಾ ನಾಯ್ಕ ತೃತೀಯ ಸ್ಥಾನ ಗಳಿಸುವುದರ ಮೂಲಕ ಸಾಧನೆಗೈದಿದ್ದಾರೆ.

RELATED ARTICLES  ದಿಶಾ ಎಂಟರ್ಪ್ರೈಸಸ್ ನಿಂದ ತಾಂತ್ರಿಕ ವರ್ಗದ ಕಾರ್ಯಾಗಾರ.

ಶಾಲಾ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಾಧ್ಯಾಪಕಿಯರು, ಶಿಕ್ಷಕ ವೃಂದ, ಹಾಗೂ ಪಾಲಕರು ಈ ಮಕ್ಕಳ ಮುಂದಿನ ಹಂತದ ಸ್ಪರ್ಧೆಗೆ ಶುಭ ಕೋರಿದ್ದಾರೆ.

RELATED ARTICLES  "ಬಿಟ್ಟಿ ಭಾಗ್ಯಕ್ಕೆ ದಿನಕ್ಕೊಂದು ಕಂಡೀಷನ್‌ಗಳು" ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಯ್ತು ಪೋಸ್ಟರ್.