ಭಟ್ಕಳ: ಉಸಿರಾಟದ ಸಮಸ್ಯೆಯಿಂದ ಮೃತರಾದ ತಾಲೂಕಿನ ಬೈಲೂರಿನ ರೈತ ರಾಮ ದೇವಾಡಿಗ (79)ರ ನೇತ್ರದಾನಕ್ಕೆ ಮೃತರ ಕುಟುಂಬದವರು ಒಪ್ಪಿಗೆ ಸೂಚಿಸಿದ್ದು, ಅದರಂತೆ ಉಡುಪಿಯ ಪ್ರಸಾದ ನೇತ್ರಾಲಯದ ವೈದ್ಯರು, ಸಿಬ್ಬಂದಿ ಇಲ್ಲಿನ ಸರಕಾರಿ ಆಸ್ಪತ್ರೆಗೆ ಆಗಮಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

RELATED ARTICLES  ಹೊನ್ನಾವರದಲ್ಲಿ ಯಶಸ್ವಿಯಾಗಿ ಸಂಘಟನೆಗೊಂಡ ಛಾಯಾಗ್ರಾಹಕ ಸಂಘದ ದಶಮಾನೋತ್ಸವ

ಮೃತರು ನಾಲ್ವರು ಪುತ್ರಿಯರು, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು- ಬಳಗವನ್ನು ಅಗಲಿದ್ದು, ಬೈಲೂರಿನಲ್ಲಿ ಅಂತ್ಯಸOಸ್ಕಾರ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪ್ರವಾದ ನೇತ್ರಾಲಯದ ಕಣ್ಣಿನ ತಜ್ಞೆ ಡಾ.ಹಮ್ಸ ನೇತ್ರದಾನ ಮಾಡಿದ ಮೃತ ಪರಮಯ್ಯ ದೇವಾಡಿಗ ಅವರ ಪ್ರಮಾಣಪತ್ರವನ್ನು ಅವರ ಪುತ್ರನಿಗೆ ಹಸ್ತಾಂತರಿಸಿದರು.

RELATED ARTICLES  ಸಂತರೊಂದಿಗೆ ಸಮಾಲೋಚನೆ ನಡೆಸಿದ ಅಮಿತ್ ಶಾ: ಪ್ರಮುಖ ವಿಷಯಗಳ ಚರ್ಚೆ.