ಕುಮಟಾ:ಪಂ. ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ಪಂ. ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಸಂಗೀತೋತ್ಸವ ಹಾಗೂ ಷಡಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಪ್ರದಾನ ಸಮಾರಂಭ ಡಿಸೆಂಬರ್ 25ರಂದು ಕೂಜಳ್ಳಿಯ ಕುಳಿಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ.
ಡಿಸೆಂಬರ್ 25ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನೆ ನಡೆಯಲಿದ್ದು, ಕುಮಟಾದ ವಿಠ್ಠಲ ರಾಮ ನಾಯಕ, ಕೂಜಳ್ಳಿಯ ಎಂ.ಜಿ. ಭಟ್ಟ ಹಾಗೂ ಸ್ವರ ಸಂಗಮದ ಅಧ್ಯಕ್ಷ ಎಸ್.ಜಿ. ಭಟ್ಟ ಪಾಲ್ಗೊಳ್ಳಲಿದ್ದಾರೆ. ನಂತರ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಪ್ರಶಸ್ತಿ ಪ್ರದಾನ ಖ್ಯಾತ ಹಿಂದುಸ್ಥಾನೀ ಗಾಯಕ ಪಂ. ಸೋಮನಾಥ ಮರ್ಡೂರು, ತಬಲಾ ವಾದಕ ಎನ್.ಎಸ್‌ಹೆಗಡೆ (ಮರಣೋತ್ತರ) ಹಾಗೂ ಯಕ್ಷಗಾನದ ಖ್ಯಾತ ಭಾಗವತ ಗೋಳಗೋಡು ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ.ಹೆಗಡೆ) ಅವರಿಗೆ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಷಡಕ್ಷರಿ ಗವಾಯಿ ಅಕಾಡೆಮಿ ಅಧ್ಯಕ್ಷ ವಸಂತ ರಾವ್, ಡಾ.ಸದಾನಂದ ಪೈ, ಶಿವಾನಂದ ಹೆಗಡೆ ಕಡತೋಕ, ಡಾ.ವಿನಾಯಕ ಸುಬ್ರಹ್ಮಣ್ಯಂ, ಮಂಜುನಾಥ ಭಟ್ಟ ಸುವರ್ಣಗದ್ದೆ, ಡಾ. ಅಶ್ವಿನಿ ಶಾನಭಾಗ ಅವರು ಪಾಲ್ಗೊಳ್ಳಲಿದ್ದಾರೆ.
ಡಿಸೆಂಬರ್ 25ರಂದು ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೂ ವಿವಿಧ ಕಲಾವಿದರುಗಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಕೂಜಳ್ಳಿಯ ಸ್ವರ ಸಂಗಮ ಹಾಗೂ ಕುಮಟಾದ ಗಂಧರ್ವ ಕಲಾಕೇಂದ್ರದ ಸಹಕಾರದಲ್ಲಿ ಆಯೋಜಿಸಲಾಗಿದೆ ಎಂದು ಪಂ.ಷಡಕ್ಷರಿ ಗವಾಯಿ ಅಕಾಡೆಮಿ ತಿಳಿಸಿದೆ.
ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಧಾರವಾಡದ ಸೋಮನಾಥ ಮರ್ಡೂರು, ಮುಂಬೈನ ಮಿಲಿಂದ ಚಿತ್ತಾಲ ಅವರಿಂದ ಗಾಯನ ಕಾರ್ಯಕ್ರಮವಿದೆ. ಬೆಳಿಗ್ಗೆ ಬೆಳಗ್ಗೆ 9ಕ್ಕೆ ಡಾ. ಕೃಷ್ಣಮೂರ್ತಿ ಭಟ್ಟ ಶಿರಸಿ ಅವರ ಗಾಯನ ಕಾರ್ಯಕ್ರಮದ ಮೂಲಕ ಆರಂಭವಾಗಲಿದೆ. ಶಾಂತಾರಾಮ ಭಟ್ಟ ಮಾಳ್ಕೋಡು ಅವರದಿಂದ ಗಾಯನ, ಕೃಷ್ಣ ದೇವಾಡಿಗ ಅವರಿಂದ ಶಹನಾಯಿ ವಾದನ, ಕೂಜಳ್ಳಿಯ ಸುಬ್ರಾಯ ಭಟ್ಟ ಅವರಿಂದ ಸಂತೂರ್, ಬೆಂಗಳೂರಿನ ದಿವ್ಯಾ ನಾಯ್ಕ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.
ಇವರಿಗೆ ಸಂವಾದಿನಿಯಲ್ಲಿ ಗೌರೀಶ ಯಾಜಿ ಕೂಜಳ್ಳಿ, ಹರಿಶ್ಚಂದ್ರ ನಾಯ್ಕ ಇಡಗುಂಜಿ, ಮಾರುತಿ ನಾಯ್ಕ ಇಡಗುಂಜಿ, ಅಜಯ ಹೆಗಡೆ ವರ್ಗಾಸರ, ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ ಕಲ್ಭಾಗ, ಎನ್.ಜಿ. ಅನಂತಮೂರ್ತಿ ಗುಣವಂತೆ, ಎಂ.ವಿ. ಶೇಷಾದ್ರಿ ಅಯ್ಯಂಗಾರ, ಗಣಪತಿ ಹೆಗಡೆ ಹರಿಕೇರಿ, ಅಕ್ಷಯ ಭಟ್ಟ ಅಂಸಳ್ಳಿ, ಭರತ ಹೆಗಡೆ ಕವಲಕ್ಕಿ ಸಹಕರಿಸಲಿದ್ದಾರೆ ಎಂದು ಹೇಳಿದ್ದಾರೆ.