ಕುಮಟಾ : ಗೋಕರ್ಣದಲ್ಲಿ ಅನೇಕ ಜನ ವಿದೇಶಿಗರು ಒಂದಿಲ್ಲೊಂದು ಪ್ರಕರಣಗಳಲ್ಲಿ ಸುದ್ದಿಯಾಗುತ್ತಿದೆ. ಅನುಮತಿ ಇಲ್ಲದೆ ಇಲ್ಲಿನ ರಥಬೀದಿ ಮತ್ತು ಮಹಾಬಲೇಶ್ವರ ಮಂದಿರದ ಮೇಲ್ಬಾಗದಲ್ಲಿ ಡೋನ್ ಕ್ಯಾಮೆರಾ ಹಾರಿಸಿ ಛಾಯಾಚಿತ್ರ ಸೆರೆ ಹಿಡಿದ ಘಟನೆ ನಡೆದಿದೆ. ಏಕಾಏಕಿ ಮಹಾಬಲೇಶ್ವರ ಮಂದಿರದ ಶಿಖರ, ರಥಬೀದಿಯ ವಿವಿಧೆಡೆ ಕ್ಯಾಮರಾ ಹಾರುತ್ತಿರುವುದನ್ನು ಎಲ್ಲರೂ ಗಮನಿಸಿದ್ದು ಎಲ್ಲಿಂದ ನಿಯಂತ್ರಣವಾಗುತ್ತಿದೆ ಎಂಬುದನ್ನು ತಿಳಿಯದೇ ಪೊಲೀಸರು ಕೆಲಕಾಲ ಗೊಂದಲಕ್ಕೀಡಾದರು.
ಈ ಬಗ್ಗೆ ಪೊಲೀಸ್ ಅಧಿಕಾರಿಯವರನ್ನು ವಿಚಾರಿಸಿದಾಗ ತಾವು ಯಾರಿಗೂ ಅನುಮತಿ ನೀಡಿಲ್ಲ.ಯಾರೆಂದು ಪತ್ತೆ ಹಚ್ಚುತ್ತೇವೆ ಎಂದರು. ಕೊನೆಗೂ ಪೊಲೀಸ್ ಹುಡುಕಾಡಿದಾಗ ವಿದೇಶಿ ಪ್ರವಾಸಿಗರು ಚಿತ್ರೀಕರಿಸುತ್ತಿರುವುದು ತಿಳಿದುಬಂತು.
ರಷ್ಯಾ ಮೂಲದ ಪ್ರವಾಸಿಗರನ್ನು ಠಾಣೆಗೆ ಕರೆತಂದು ನಿಷೇಧಿತ ಪ್ರದೇಶದಲ್ಲಿ ಚಿತ್ರೀಕರಣ ಮಾಡದಂತೆ ತಿಳಿ ಹೇಳಿದ್ದಾರೆ. ತಮಗೆ ತಿಳಿಯದೆ ಮಾಡಿದ್ದಾಗಿ ಒಪ್ಪಿಕೊಂಡು ಚಿತ್ರೀಕರಿಸಿದ ಎಲ್ಲವನ್ನು ತೆಗೆದು ಹಾಕಿದ್ದು ನಂತರ ಪ್ರವಾಸಿಗರನ್ನು ಬಿಡಲಾಗಿದೆ ಎಂಬ ಮಾಹಿತಿ ದೊರೆತಿದೆ. ಇಸ್ಕಾನ್ ಅನುಯಾಯಿಗಳಾದ ಈ ಪ್ರವಾಸಿಗರು ಈ ಭಾಗದ ವಿವಿಧೆಡೆ ಚಿತ್ರೀಕರಿಸಿದ್ದು, ಅದರಂತೆ ಡೋನ್ ಮೂಲಕ ದೇವಾಲಯದ ಒಳಭಾಗ ಹಾಗೂ ಇತರ ದೃಶ್ಯಾವಳಿಗಳನ್ನು ಸರೆ ಹಿಡಿಯುತ್ತಿದ್ದರು ಎನ್ನಲಾಗಿದೆ.