ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯು ಹಲವಾರು ಸಾಧಕರ ಹಾಗೂ ಕ್ರೀಡಾಪಟುಗಳ ತವರೂರು. ಇಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಹುಡುಗರ ವಾಲಿಬಾಲ್ ಸೆಲೆಕ್ಷನ್‌ನಲ್ಲಿ ಅಟ್ಯಾಕರ್ ಆಗಿ 4ನೇ ಸ್ಥಾನದಲ್ಲಿ ಅಂಕೋಲಾ ಶೀಳ್ಯದ ವಿಮಲಾನಂದ ನಾಯಕ ಆಯ್ಕೆಯಾಗಿದ್ದಾರೆ.
ಇವರು ತಮಿಳುನಾಡಿನ ಎಸ್.ಆರ್.ಎಂ. ವಿಶ್ವವಿದ್ಯಾಲ ಯದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತದ ಅಂತರ ವಿಶ್ವವಿದ್ಯಾಲಯಗಳ ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಾಲಿಬಾಲ್ ಕ್ರೀಡಾಪಟುವಾಗಿ ಹೊರಹೊಮ್ಮಿದ ಶಾಸಕರ ಮಾದರಿ ಶಾಲೆ ಬಾಸಗೋಡದ ಹಳೆಯ ವಿದ್ಯಾರ್ಥಿ, ಶೀಳ್ಯದ ದಿ|| ಮೋಹನದಾಸ ನಾಯಕರ ಕನಸಿನ ಕೂಸು ವಿಮಲಾನಂದ ನಾಯಕ ಎನ್ನುವುದೇ ಉತ್ತರಕನ್ನಡದ ಹೆಮ್ಮೆ.