ಕುಮಟಾ ದಿಂದ ಅಘನಾಶಿನಿ ಸಮುದ್ರ ತೀರದಗುಂಟಾ ರೆಸಾರ್ಟ ಗಳು ತಲೆಎತ್ತಿದ್ದು ಪ್ರತಿದಿನವೂ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.ಕಾರಣ ಸದಾಕಾಲ ಈ ಮಾರ್ಗವು ವಾಹನಗಳ ಓಡಾಟದಿಂದ ತುಂಬಿರುವ ಸನ್ನಿವೇಶವು ಸರ್ವೇಸಾಮಾನ್ಯ ಆಗಿದೆ.ಇದರ ಜೊತೆಗೆ ಗೂಗಲ್ ನಕಾಶೆಯ ಮೊರೆ ಹೊಕ್ಕು ಸ್ವತಂತ್ರ ವಾಹನ ಚಲಾಯಿಸಿಕೊಂಡು ಬರುವ ಪ್ರಯಾಣಿಕರಿಗೆ ಕುಮಟಾ ಅಘನಾಶಿನಿ ಮಾರ್ಗದಿಂದ ತದಡಿಗೆ ಹೋಗಲು ಅಘನಾಶಿನಿ ನದಿಗೆ ಬಾರ್ಜ ವ್ಯವಸ್ಥೆ ಇರುವ ಬಗ್ಗೆ ಮಾಹಿತಿನೀಡುತ್ತಿದ್ದು ಈ ವ್ಯವಸ್ಥೆ ಕೇವಲ ದ್ವಿಚಕ್ರ ವಾಹನಗಳಿಗೆ ಮಾತ್ರ ಎಂಬ ವಾಸ್ತವದ ಅರಿಮಿಲ್ಲದೇ ನಾಲ್ಕು ಚಕ್ರದ ವಾಹನವೂ ಸಾಗಬಹುದೆಂಬ ತಪ್ಪು ಸಂದೇಶದಿಂದಾಗಿ ಪ್ರತಿನಿತ್ಯ ಹಲವಾರುಮಂದಿ ಪ್ರಯಾಣಿಕರು ನಾಲ್ಕು ಚಕ್ರದ ವಾಹನದ ಮೂಲಕ ಅಘನಾಶಿನಿಯ ತನಕ ಬಂದು ಮುಂದೆ ಗೋಕರ್ಣಕ್ಕೆ ಹೋಗಲು ಬಾರ್ಜ ವ್ಯವಸ್ಥೆ ಇಲ್ಲ ಎಂದು ತಿಳಿದ ಬಳಿಕ ಪೆಚ್ಚು ಮೋರೆಹಾಕಿಕೊಂಡು
ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮುರಳುತ್ತಿದ್ದಾರೆ.ವಾರದ ಕೊನೆಯಲ್ಲಿಯಂತು ಈ ಮಾರ್ಗದಲ್ಲಿ ವಾಹನಗಳು ಅಧಿಕವಾಗಿದ್ದು ಬೀಡಾಡಿ ದನಗಳ ಹಾಗೂ ನಾಯಿಗಳ ಹಾವಳಿಯಿಂದ ಅಪಘಾತದ ಸಂಖ್ಯೆಯೂ ಇಲ್ಲಿ ಹೆಚ್ಚುತ್ತಿರುವುದು ಆಘಾತಕಾರಿ ವಿಷಯವಾಗಿದೆ.

RELATED ARTICLES  ಕುಮಟಾ : ಜನರ ಸಮಸ್ಯೆ ಆಲಿಸಿದ ಕಂದಾಯ ಸಚಿವ ಆರ್. ಅಶೋಕ.


ದಿನಾಂಕ 17 ಡಿಸೆಂಬರ್ ಶನಿವಾರ ಸಾಯಂಕಾಲ ಅಘನಾಶಿನಿ ಯಿಂದ ತದಡಿಗೆ ಬಾರ್ಜ ಮೂಲಕ ತೆರಳ ಬಹುದೆಂದು ತಪ್ಪು ತಿಳುವಳಿಕೆಯಿಂದ ಕಾರ್ ಮೂಲಕ ಬಂದ ಗೋವಾದ ಪ್ರವಾಸಿಗರ ವಾಹನ ಅಪಘಾತಕ್ಕೆ ಒಳಗಾಗಿ ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ದಿನವೂ ಇಂಥ ಘಟನೆಗಳು ಅಲ್ಲಲ್ಲಿ ಜರುಗುತ್ತಲಿರುವುದರಿಂದ ಕುಮಟಾದಿಂದ ಬರುವ ಪ್ರವಾಸಿಗರ ನಾಲ್ಕು ಚಕ್ರ ವಾಹನಕ್ಕೆ ಅಘನಾಶಿನಿ ಯಿಂದ ತದಡಿ ಬಾರ್ಜ ವ್ಯವಸ್ಥೆ ಇರುವುದಿಲ್ಲ ಎಂಬ ಸೂಚನಾ ಫಲಕ ಇರುವುದಿಲ್ಲ ಎಂಬ ಸೂಚನಾ ಫಲಕವನ್ನು ಹಳಕಾರ ಕ್ರಾಸ್ ಬಳಿ ಅಳವಡಿಸಬೇಕಾದ ಅವಶ್ಯಕತೆ ಇದ್ದು ಸಂಬಂಧಿಸಿದ ಇಲಾಖೆಯವರು ಕ್ರಮ ಕೈಗೊಳ್ಳಬೇಕಿದೆ.

RELATED ARTICLES  ಮುರ್ಡೇಶ್ವರದಲ್ಲಿ ಸಮುದ್ರದಲ್ಲಿ ಮುಳುಗಿ ಈರ್ವರು ನಾಪತ್ತೆ.

ವರದಿ – ಚಿದಾನಂದ ಭಂಡಾರಿ ,ಕಾಗಾಲ