ಕುಮಟಾ : ಹಲವಾರು ವರ್ಷಗಳಿಂದ , ಸಂಘ ಸಂಸ್ಥೆ ,ಸಂಘಟನೆಗಳಲ್ಲಿ ತನ್ನನ್ನ ತೊಡಗಿಸಿಕೊಂಡು ಎಲ್ಲಾ ಸಮಾಜದವರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಜನಾನುರಾಗಿಯಾಗಿದ್ದ ಹಾಗೂ ಶ್ರೀ ರಾಮಚಂದ್ರಾಪುರ ಮಠದ ಹವ್ಯಕ ಮಂಡಲದ ವಿವಿಧ ಜವಬ್ದಾರಿ ನಿರ್ವಹಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ರಮಾನಂದ ಭಟ್ಟ ಬೆತ್ತಗೇರಿ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರ ಅಗಲುವಿಕೆಗೆ ಶಾಸಕರಾದ ದಿನಕರ ಶೆಟ್ಟಿ ಹಾಗೂ ಕೆಡಿಸಿಸಿ ಬ್ಯಾಂಕ್ ನ ನಿರ್ದೇಶಕರು ಕಾಂಗ್ರೆಸ್ ಮುಖಂಡರಾದ ಶಿವಾನಂದ ಹೆಗಡೆ ಕಡತೋಕಾ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

RELATED ARTICLES  ಇಂದಿನ(ದಿ-17/01/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

ಸರಳ ಸಜ್ಜನ ಸಮಾಜ ಸೇವಕ , ಹಲವಾರು ವರ್ಷಗಳಿಂದ , ಸಂಘ ಸಂಸ್ಥೆ ,ಸಂಘಟನೆಗಳಲ್ಲಿ ತನ್ನನ್ನ ತೊಡಗಿಸಿಕೊಂಡು ಎಲ್ಲಾ ಸಮಾಜದವರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಜನಾನುರಾಗಿಯಾಗಿ ಬದುಕಿ ಬಾಳಿದ ಬೆತ್ಕೇರಿ ರಮಾನಂದ ಭಟ್ಟರು ನಮ್ಮನ್ನ ಅಗಲಿದ್ದಾರೆ ಅನ್ನುವುದು ತುಂಬಾ ನೋವಿನ ಸಂಗತಿಯಾಗಿದ್ದು, ಅವರ ಅಗಲುವಿಕೆಯ ನೋವನ್ನ ಭರಿಸುವ ಶಕ್ತಿಯನ್ನ ಆ ಭಗವಂತ ಕುಟುಂಬಸ್ತರಿಗೆ ಕರುಣಿಸಲಿ ಎಂದು ಪ್ರಾರ್ಥಿಸುವ – ಶಿವಾನಂದ ಹೆಗಡೆ ಕಡತೋಕಾ, ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರು.

RELATED ARTICLES  ದಿನಕರ ಶೆಟ್ಟಿ ಗೆಲುವಿಗೆ ಬಲವಾಗಿ ಬಂದ ಎಂ.ಜಿ ಭಟ್ಟ.

ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಬೂತ್ ಸಂಖ್ಯೆ 150ರ ಅಧ್ಯಕ್ಷರಾದ ಶ್ರೀ ರಮಾನಂದ ಭಟ್ಟರು ನಿಧನರಾಗಿರುವುದು ಅತ್ಯಂತ ವಿಷಾದನೀಯ ಸಂಗತಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬದ ಸದಸ್ಯರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸೋಣ – ದಿನಕರ ಶೆಟ್ಟಿ, ಶಾಸಕರು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರ.