ಕಾರವಾರ: ಭಯೋತ್ಪಾದಕರಿಗೆ ಬೆಂಬಲ ಕೊಡುವಂತಹ ಪಕ್ಷ ಯಾವುದಾದರೂ ಇದ್ರೆ ಅದು ಬಿಜೆಪಿ. ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಸರ್ಟಿಫಿಕೇಟ್ ಕೊಡುವುದು ಬೇಕಾಗಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು. ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ರಾಷ್ಟ್ರದ ಮೊಟ್ಟ ಮೊದಲ ಭಯೋತ್ಪಾದಕ, ಭಯೋತ್ಪಾದಕರಿಗೆ ಬೆಂಬಲಕೊಟ್ಟ ರಾಷ್ಟ್ರದ ಮೊಟ್ಟ ಮೊದಲ ಸಂಘಟನೆಗಳು, ಅದರ ಸದಸ್ಯರಿಂದ ನಮಗೆ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದರು. ಮಂಗಳೂರು ಕುಕ್ಕರ್ ಬ್ಲ್ಯಾಸ್ಟ್ ಪ್ರಕರಣದಲ್ಲಿ ವಿಚಾರಣೆಗೂ ಮೊದಲೇ ಇದು ಭಯೋತ್ಪಾದಕ ಕೃತ್ಯ ಎಂದು ಕಪ್ಪೆಗಳಂತೆ ಹೊಡೆದುಕೊಂಡಿದ್ದು ಬಿಜೆಪಿಯವರು. ಇದಾದ ಒಂದು ವಾರದ ಬಳಿಕ ಪೊಲೀಸ್ ಕಮಿಷನರ್ ಅವರು ನಾವು ಯಾವುದೇ ರೀತಿಯ ವಿಚಾರಣೆ ಮಾಡಿಲ್ಲ ಎಂದು ಭಯೋತ್ಪಾದಕ ಹೇಳಿಕೆ ಕುರಿತು ಹೇಳಿದ್ದರು. ಮತದಾರರ ಪಟ್ಟಿಯಲ್ಲಿ ಮಾಡಿದ್ದ ಕಳ್ಳತನ, 40 ಪರ್ಸೆಂಟ್ ಕಮಿಷನ್ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಭಯೋತ್ಪಾದಕ ಹೇಳಿಕೆಯನ್ನ ನೀಡುವ ಕೆಲಸ ಮಾಡಿದ್ದರು. ಇದನ್ನೇ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಅವರು ಹೇಳಿದ್ದು ನಾವು ಯಾವುದೇ ರೀತಿಯ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ನೀಡುತ್ತಿಲ್ಲ ಎಂದರು.

RELATED ARTICLES  ಇನ್ನೊಬ್ಬರ ಮೇಲೆ ಸುಳ್ಳು ಆರೋಪ ಮಾಡುವ ನಿಮಗೆ ನೈತಿಕತೆ ಇದೆಯೇ? ಶಾಸಕರಿಗೆ ಮಾಜಿ ಶಾಸಕರ ಪ್ರಶ್ನೆ.

ಕುಕ್ಕರ್ ಬ್ಲ್ಯಾಸ್ಟ್ ಪ್ರಕರಣದಲ್ಲಿ ಭಾಗಿಯಾದವರನ್ನು ಕಾಂಗ್ರೆಸ್ ಬೆಂಬಲಿಸುತ್ತಿಲ್ಲ. ಆದರೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ. ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಅದನ್ನು ರಾಜಕೀಯಕ್ಕೋಸ್ಕರ ಬಳಸಿಕೊಂಡು ನೈಜ ಸಮಸ್ಯೆಗಳನ್ನ, ಜನಸಾಮಾನ್ಯರ ಗಂಭೀರ ಸಮಸ್ಯೆಗಳನ್ನ ಈ ರೀತಿ ಮಾತನಾಡಿ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಎಂದರು. ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಾಲಯ ಇಲ್ಲದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನಾವು ಕೂಡ 40 ಪರ್ಸೆಂಟ್ ಕಮಿಷನ್ ಪಡೆದಿದ್ದರೆ ಎಲ್ಲಾ ತಾಲ್ಲೂಕುಗಳಲ್ಲೂ ನಮ್ಮ ಪಕ್ಷದ ಕಚೇರಿಗಳನ್ನ ಸ್ಥಾಪನೆ ಮಾಡುತ್ತಿದ್ದೆವು. ನಾವೇನು ಸತ್ಯಹರಿಶ್ಚಂದ್ರರೆoದು ಹೇಳುವುದಿಲ್ಲ, ನಮ್ಮ ಪಕ್ಷದಲ್ಲಿದ್ದವರು ಲೂಟಿ ಮಾಡಲು ಹೋಗಿಲ್ಲ. ನಮ್ಮ ಅವಧಿಯಲ್ಲೇನಾದ್ರೂ ಭ್ರಷ್ಟಾಚಾರ, ಹಗರಣ ನಡೆದಿದ್ರೆ ಡಬ್ಬಲ್ ಎಂಜಿನ್ ಸರ್ಕಾರ ಇದೆ. ಅಂತಹವರನ್ನು ಒಬ್ಬರನ್ನೂ ಬಿಡದೇ ಜೈಲಿಗೆ ಹಾಕಿ ಎಂದರು.

RELATED ARTICLES  ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ ಶಾಸಕಿ ರೂಪಾಲಿ ನಾಯ್ಕ

ಇದನ್ನೂ ಓದಿ – ಮದುವೆಗೆ ಹೋಗಿ ಬರುವಾಗ ನಡೆಯಿತು ಅವಘಡ : ಮಾಂಗಲ್ಯ ಕಳೆದುಕೊಂಡ ಮಹಿಳೆ.

ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರದೇಶ ಎಲೆಕ್ಷನ್ ಕಮಿಷನ್ ಸಭೆಯಲ್ಲಿ ಯಾವೆಲ್ಲ ಮಾನದಂಡಗಳ ಆಧಾರದ ಮೇಲೆ ಟಿಕೆಟ್ ಕೊಡಬೇಕು ಎನ್ನುವ ಚರ್ಚೆಯಾಗಲಿದೆ. ನಾವು ಆಪರೇಷನ್ ಕಮಲ ರೀತಿ ಮಾಡುವ ಜನ ಅಲ್ಲ. ನಮ್ಮಲ್ಲಿರುವ ವಿವಿಧ ಕಮಿಟಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು. ಕಾಂಗ್ರೆಸ್‌ನಲ್ಲಿ ರಾತ್ರಿ ಬೆಳಗಾಗುವುದರೊಳಗೆ ಯಾವುದು ತೀರ್ಮಾನವಾಗುವುದಿಲ್ಲ, ನಿಧಾನವಾದರೂ ಸೂಕ್ತ ನಿರ್ಣಯಗಳನ್ನ ಮಾಡಲಾಗುತ್ತದೆ. ಜನವರಿಯಲ್ಲಿ ಬಹುತೇಕ ಶೇಕಡಾ 50ರಷ್ಟು ಟಿಕೆಟ್ ಘೋಷಣೆಯಾಗಲಿದೆ ಎಂದು ತಿಳಿಸಿದ್ದಾರೆ.