ಕಾರವಾರ : ಹೊನ್ನಾವರದಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬಿಜೆಪಿ ಶಾಸಕರ ವಿರುದ್ಧವೇ ಗುಡುಗಿದ್ದಾರೆ. ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ
ಹತ್ಯೆ ಪ್ರಕರಣವನ್ನು ಸಿಬಿಐ ಮರುತನಿಖೆ ಮಾಡದಿದ್ದರೆ ಬಿಜೆಪಿ ಶಾಸಕರು, ಸಂಸದರ ಮನೆ ಮುಂದೆ ಉಗ್ರ ಧರಣಿ ಮಾಡುವುದಾಗಿ ಅವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಅಂದಿನ ಜಿಲ್ಲಾಧಿಕಾರಿ ಹಾಗೂ ಪೋಸ್ಟ್ ಮಾಟಮ್ ಮಾಡಿದ ವೈದ್ಯರನ್ನು ಸಹ ತನಿಖೆಯಲ್ಲಿ ಪಾರ್ಟಿ ಮಾಡಿ ಮರು ತನಿಖೆ ಮಾಡಬೇಕು. ಬಿಜೆಪಿಯವರು ಚುನಾವಣೆಯಲ್ಲಿ ಕರಾವಳಿ ಉದ್ದಕ್ಕೂ ಪರೇಶ್ ಮೇಸ್ತಾ ತಂದೆತಾಯಿಯನ್ನು ಪ್ರಚಾರಕ್ಕೆ ಕರೆದುಕೊಂಡು ಹೋದ್ರು, ಐದು ವರ್ಷ ಆಯ್ತು ಅವರ ಮನೆಯಲ್ಲಿ ಏನಿದೆ ಏನಿಲ್ಲ ಎನ್ನುವುದನ್ನು ಕೇಳುವ ಸೌಜನ್ಯ ತೋರಲಿಲ್ಲ. ಘಟನೆಯ ಸಂಪೂರ್ಣ ಲಾಭವನ್ನು ಅಂದಿನ ಬಿಜೆಪಿ ಇಂದಿನ ಶಾಸಕರು,ಎಂಪಿ ಯವರು ತೆಗೆದುಕೊಂಡಿದ್ದಾರೆ. ಇವತ್ತು ಐದು ಎಮ್.ಎಲ್.ಎ ಗಳು ಎಂಪಿ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಸಹ ಅವರು ಗುಡುಗಿದ್ದಾರೆ.
ಜನರನ್ನ ಕಾರ್ಯಕರ್ತರನ್ನು ಬೀದಿಗಿಳಿಸಿ ಅವರ ಮೇಲೆ ಕೇಸು ಹಾಕಿಸಿ ತಾವು ಗೆದ್ದರು. ಇಂದು ಆನಂದವಾಗಿ ಮೆರೆಯುತಿದ್ದಾರೆ. ಆದ್ರೆ ಪರೇಶ್ ಮೇಸ್ತಾ ಸಾವಿಗೆ ನ್ಯಾಯ ಕೊಡಿಸಲಿಲ್ಲ.ಹೆಣದ ಮೇಲೆ ರಾಜಕೀಯ ಮಾಡುವ ಬಿಜೆಪಿ ಸರ್ಕಾರಕ್ಕೆ ಮಾನವೀಯತೆ, ಹಿಂದೂ ಕಾರ್ಯಕರ್ತರ ಮೇಲೆ ಕಳಕಳಿ ಇದ್ದರೇ ಕೂಡಲೇ ಸಿಬಿಐ ಗೆ ಮರು ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಈ ಮೂಲಕ ಅವರ ಹೇಳಿಕೆ ಇದೀಗ ಹೊಸ ಸಂಚಲನ ಮೂಡಿಸಿದೆ.