ಕಾರವಾರ: ನಗರದಲ್ಲಿ ಅಪೋಲೊ ಐಸ್‌ಕ್ರೀಂ ಸಂಸ್ಥೆ ಸ್ಥಾಪಿಸಿ ಹೆಸರಾಗಿದ್ದ ಚಂದ್ರಕಾಂತ ನಾಯ್ಕ (52) ಅನಾರೋಗ್ಯದಿಂದಾಗಿ ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಈ ಮೊದಲಿನಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಪತ್ನಿ, ಇಬ್ಬರು ಪುತ್ರಿಯರು, ಅಪಾರ ಬಂಧು- ಬಳಗ, ಸ್ನೇಹಿತರನ್ನು ಅಗಲಿದ್ದಾರೆ. ಬಹಳ ಶ್ರಮಜೀವಿಯಾಗಿದ್ದ ಅವರು, ಸೀಬರ್ಡ್ ನಿರಾಶ್ರಿತರೂ ಆಗಿದ್ದರು. ಸ್ವಯಂ ಉದ್ಯೋಗ ಸ್ಥಾಪಿಸಿಕೊಂಡು ಹಲವರಿಗೆ ಉದ್ದಿಮೆ ಸ್ಥಾಪನೆಗೆ ಪ್ರೇರಣೆಯಾಗಿದ್ದರು.