ಕುಮಟಾ : ರೈತರ ಸಹಾಯಕ್ಕಾಗಿ ನಮ್ಮ ಬಿಜೆಪಿ ಸರ್ಕಾರ ಹಲವಾರು ಅತ್ಯುತ್ತಮ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದು, ಅವುಗಳಲ್ಲಿ ಖಾರ್‌ಲ್ಯಾಂಡ್ ಯೋಜನೆ ಕೂಡ ಪ್ರಮುಖವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಹೊನ್ನಾವರ ತಾಲೂಕಿನ ಹಳದೀಪುರ ಗ್ರಾಪಂ ವ್ಯಾಪ್ತಿಯ ಕರಿಮೂಲೆ ಸೇತುವೆ ಎಡದಂಡೆಗೆ ಸಣ್ಣನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ 6.83 ಕೋಟಿ ರೂ. ವೆಚ್ಚದಲ್ಲಿ ಖಾರ್‌ಲ್ಯಾಂಡ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕರಾವಳಿ ಭಾಗದಲ್ಲಿ ರೈತರ ಜಮೀನಿಗೆ ಉಪುನೀರು
ನುಗ್ಗಿ ಬೆಳೆಗಳಿಗೆ ಹಾನಿಯನ್ನು ಉಂಟು ಮಾಡುತ್ತಿತ್ತು. ಇದರಿಂದ ರೈತರು ಅಪಾರ ನಷ್ಟ ಎದುರಿಸುತ್ತಿದ್ದರು. ರೈತರನ್ನು ಈ ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದ ಸಚಿವ ಮಾಧುಸ್ವಾಮಿಯವರು ಖಾರ್‌ಲ್ಯಾಂಡ್ ನಿರ್ಮಾಣಕ್ಕೆ ವಿಶೇಷ ಕಾಳಜಿ ವಹಿಸಿ, ದೊಡ್ಡ ಪ್ರಮಾಣದ ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ. ಈ ಯೋಜನೆಯಿಂದ ಮೀನು ಹಾಗೂ ಸಿಗಡಿ ಉತ್ಪಾದಕರಿಗೂ ಸಹಾಯವಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ – ಮದುವೆ ಮುಗಿಸಿ ಬರುವಾಗ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳರು.
ಈ ಸಂದರ್ಭದಲ್ಲಿ ಹಳದೀಪುರ ಗ್ರಾಪಂ ಸದಸ್ಯರಾದ ರೇಣುಕಾ ಶರತ್, ಗಣೇಶ ಪೈ, ಸುಮಿತ್ರಾ ಗೌಡ, ಶಿವಾನಂದ ನಾಯ್ಕ, ಈಶ್ವರ ನಾಯ್ಕ, ಮಂಗಲಾ ಮುಕ್ರಿ, ಎಂ ಎಚ್ ನಾಯ್ಕ, ರತ್ನಾಕರ ನಾಯ್ಕ, ಬಿಜೆಪಿ ಮುಖಂಡರಾದ ಮಂಜುನಾಥ ಗೌಡ, ಸತೀಶ್ ಹಬ್ಬು, ಸಹಾಯಕ ಅಭಿಯಂತರರಾದ ಅಮಿತಾ ತಳೆಕರ್ ಹಾಗೂ ಲೋಕೇಶ್ ನಾಯ್ಕ, ಗುತ್ತಿಗೆದಾರರಾದ ದಿನೇಶ ಹೆಗಡೆ ಹಾಗೂ ಲೋಕೇಶ ನಾಯ್ಕ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಉತ್ತರಕನ್ನಡದ ಪ್ರಮುಖ ಎಲ್ಲಾ ಸುದ್ದಿಗಳನ್ನೂ ಓದಲು ಕ್ಲಿಕ್ ಮಾಡಿ.