ಹೆಚ್ಚುವರಿ ಶಿಕ್ಷಕರ ವರ್ಗಾವಣೆಯನ್ನು 2023ರ ಜೂನ್ -ಜುಲೈ ಮಾಹೆಯ ದಾಖಲಾತಿಯನ್ನು ಅಧರಿಸಿ 2023ರ ಅಕ್ಟೋಬರ್ ಮಾಹೆಗೆ ಮುಂದೂಡಲು ವಿವಿಧ ಅಂಶಗಳನ್ನು ಒಳಗೊಂಡ ಮನವಿ ಪತ್ರವನ್ನು ಕರ್ನಾಟಕ ರಾಜ್ಯ ಬೋಧಕರ ಸಂಘದಿಂದ ಕುಮಟಾದ ಮಾನ್ಯ ವಿಭಾಗೀಯ ದಂಡಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರಾದ ಶ್ರೀ ರಾಘವೇಂದ್ರ ಜಗಲಾಸರ್ ಮತ್ತು ತಾಲೂಕ ಪಂಚಾಯತದ ಕಾರ್ಯ ನಿರ್ವಹಣಾಧಿಕಾರಿಗಳ ಪ್ರತಿನಿಧಿಯಾದ ಶ್ರೀ ವೈದ್ಯ ರವರ ಮುಖಾಂತರ ಸರ್ಕಾರಕ್ಕೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾ ಧ್ಯಕ್ಷರಾದ ಮಂಜುನಾಥ ಗಾoವಕರ ಬರ್ಗಿ, ರಾಜ್ಯ ಸಂಚಾಲಕರಾದ ವಿಜಯ ಕುಮಾರ, ಕೋಶಾಧ್ಯಕ್ಷ ರಾದ ಶಿವಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್, ಪಧವಿದರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ನಾಯಕ, ಲಾ. ಗಣಪತಿ ನಾಯಕ ಶೀಳ್ಯ, ಬಾಲಚಂದ್ರ ಗಾoವಕರ, ಈಶ್ವರ ಕುಬಾಲ್ ಹಾಗೂ ಮಹಮ್ಮದ್ ಶಫಿ ಮೊದಲಾದವರಿದ್ದರು.