ಅಂಕೋಲಾ : ಕಾರವಾರ ಮತ್ತು ಅರ್ಗಾ ಪ್ರತಿನಿತ್ಯ ಹೊಗುವ ವಿದ್ಯಾರ್ಥಿಳಿಗೆ ಮತ್ತು ನೌಕರರಿಗೆ ಸರಿಯಾದ ಸಮಯಕ್ಕೆ ಬಸ್‌ಗಳು ಬಾರದೆ ಇರುವುದನ್ನು ಖಂಡಿಸಿ ಅಂಕೋಲಾ ಬಸ್ ನಿಲ್ದಾಣದಲ್ಲಿ ಸೋಮವಾರ ಮುಂಜಾನೆ ವಿದ್ಯಾರ್ಥಿಗಳು ಮತ್ತು ನೌಕರರು ಬಸ್ ತಡೆಹಿಡಿದು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.

ಅಂಕೋಲಾದಿಂದ ಕಾರವಾರ ಮತ್ತು ಅರ್ಗಾಕ್ಕೆ ಪ್ರತಿ ನಿತ್ಯ ನೂರಾರು ವಿದ್ಯಾರ್ಥಿಗಳು ಮತ್ತು ಕೆಲಸಕ್ಕೆ ನೂರಾರು ನೌಕರರು ಮುಂಜಾನೆ ಸಮಯದಲ್ಲಿ ತೆರಳುತ್ತಾರೆ. ಆದರೆ ಸೋಮವಾರ ಮಾತ್ರ ಸರಿಯಾದ ಸಮಯಕ್ಕೆ ಬಸ್‌ಗಳು ಬಾರದೆ ಇರುವುದನ್ನು ಗಮನಿಸಿ ಬಸ್ ಬರುವಿಕೆಯನ್ನು ಕಾದು ಕಾದು ಸುಸ್ತಾಗಿ ಬಸ್ ನಿಲ್ದಾಣದಲ್ಲಿಯೇ ದಿಡೀರ ಪ್ರತಿಭಟನೆ ನಡೆಸಿದರು.

RELATED ARTICLES  ಸಿಲೆಂಡರ್ ಸ್ಪೋಟ : ಬೆಳ್ಳಂಬೆಳಗ್ಗೆ ನಡೆದೋಯ್ತು ಅವಘಡ

ಬಸ್ ನಿಲ್ದಾಣದಿಂದ ಬೇರೆಡೆಗೆ ಹೋಗುವ ಬಸ್‌ಗಳನ್ನ ತಡೆದು ಪ್ರತಿಭಟನೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ನಿಯಂತ್ರಣಾಧಿಕಾರಿಗಳು ಆಗಮಿಸಿ ಪ್ರತಿಭಟನಾಕಾರರ ನಡುವೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಗ್ರಾಮೀಣ ಪ್ರದೇಶಕ್ಕೆ ಹೋಗುವ ಬಸ್‌ನ್ನು ಕಾರವಾರಕ್ಕೆ ಬಿಡುವುದರ ಮೂಲಕ ಪ್ರತಿಭಟನೆ ಅಂತ್ಯಗೊಂಡಿತು.

RELATED ARTICLES  ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಕುಚ್ಚಲಕ್ಕಿ..!