ಹೊನ್ನಾವರ : ಸಾಮಾಜಿಕ ಕಾರ್ಯಕರ್ತರಾಗಿ, ಸಮಾಜಮುಖಿ ಚಿಂತನೆಯ ಮೂಲಕ ಎಲ್ಲರ ಆತ್ಮೀಯರಾಗಿದ್ದ ದಿ. ರಾಮಚಂದ್ರ ಎಸ್. ಹೆಗಡೆಯವರ ದ್ವಿತೀಯ ಪುಣ್ಯತಿಥಿಯ ಪ್ರಯುಕ್ತ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳ ಮದ್ದಳೆ ಕಾರ್ಯಕ್ರಮವು ಡಿಸೆಂಬರ್ 22 ರ ಗುರುವಾರ ಸಾಯಂಕಾಲ 3.30 ರಿಂದ ನಮ್ಮ “ಹೆಗಡೆಮನೆ”ಕಡತೋಕಾದಲ್ಲಿ ನಡೆಯಲಿದೆ.
“ಭೀಷ್ಮ ವಿಜಯ” ತಾಳಮದ್ದಲೆ ಅನಾವರಣಗೊಳ್ಳಲಿದ್ದು, ಹಿಮ್ಮೇಳದಲ್ಲಿ ಶ್ರೀ ರಾಘವೇಂದ್ರ ಆಚಾರ್ಯ,ಜನ್ಸಾಲೆ,ಶ್ರೀ ರಾಮಕೃಷ್ಣ ಹೆಗಡೆ, ಹಿಲ್ಲೂರು. ಶ್ರೀ ಪರಮೇಶ್ವರ ಭಂಡಾರಿ ಕರ್ಕಿ, ಶ್ರೀ ಸುನಿಲ್ ಭಂಡಾರಿ, ಕಡತೋಕಾ ಭಾಗವಹಿಸುವರು.
ಮುಮ್ಮೇಳದಲ್ಲಿ ಶ್ರೀ ಅಶೋಕ ಭಟ್ ಉಜಿರೆ,ಶ್ರೀ ಜಬ್ಬಾರ್ ಸಮೋ, ಶ್ರೀ ಪವನ ಕಿರಣಕೆರೆ, ಶ್ರೀ ವಿಶ್ವೇಶ್ವರ ಭಟ್ಟ, ಶ್ರೀ ಪ್ರಭಾರಕ ಜೋಶಿ. ಇನ್ನುಳಿದ ಸುಪ್ರಸಿದ್ಧ ಕಲಾವಿದರನ್ನು ನಿರೀಕ್ಷಿಸಲಾಗಿದೆ. ಕಾರ್ಯಕ್ರಮಕ್ಕೆ ಸೂರ್ಯನಾರಾಯಣ ಹೆಗಡೆ. ಶಿವಾನಂದ ಹೆಗಡೆ ಇವರುಗಳು ಸರ್ವ ಕಲಾಸಕ್ತರನ್ನು ಸ್ವಾಗತಿಸಿದ್ದಾರೆ.