ಭಟ್ಕಳ:ತಾಲೂಕಿನ ಪ್ರಸಿದ್ಧ ಕ್ಷೇತ್ರವಾದ ಅಳವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿ ಹದಿನೈದು ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಉತ್ಸವದಲ್ಲಿ ಜಿಲ್ಲೆಯ ಪ್ರಸಿದ್ಧ ಸುಗಮ ಸಂಗೀತ ಗಾಯಕರು, ದೂರದರ್ಶನ ಚಂದನ ವಾಹಿನಿಯ ಮಧುರ ಮಧುರವೀ ಮಂಜುಳಗಾನದ ಗಾಯಕ ಉಮೇಶ ಮುಂಡಳ್ಳಿಯವರ ನಿನಾದ ಸಾಹಿತ್ಯ ಸಂಗೀತ ಸಂಚಯದಿಂದ ಭಕ್ತಿ ಲಹರಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ಶ್ರೀ ದುರ್ಗಾಪರಮೇಶ್ವರಿ ದೇವಿಯ ಸಾನಿಧ್ಯದಲ್ಲಿ ಸೂಮಾರು ಎರಡುವರೆ ಗಂಟೆಗಳ ಕಾಲ ನಡೆದ ಭಕ್ತಿ ಲಹರಿ ಕಾರ್ಯಕ್ರವೂ ಕುಮಾರಿ ನಿನಾದ ಉಮೇಶಳ ದೇವಿಯ ಶ್ಲೋಕ್ ದೊಂದಿಗೆ ಪ್ರಾರಂಭವಾಗಿ ನೆರೆದ ಎಲ್ಲಾ ಭಜಕರ ಮೆಚ್ಚುಗೆ ಮತ್ತು ಅಭಿನಂದನೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಮುಂಡಳ್ಳಿಯವರು ದಾಸರೆಂದರೆ ಪುರಂದರ ದಾಸರಯ್ಯ, ಹರಿಚರಣಕ್ಕೆ ನಾ ಶರಣಾದೆ ಮೊದಲಾದ ದಾಸರ ಪದಗಳ ಜೊತೆಗೆ , ಧರೆಗವತರಿಸಿದೆ ಸ್ವರ್ಗದ ಸ್ಪರ್ದಿüಯು, ನಾಡದೇವಿಯ ಆರಾಧನೆ ಮೊದಲಾದ ದೇಶ ಭಕ್ತಿ ಗೀತೆಯನ್ನು ಹಾಡಿದರೆ , ಗಾಯಕಿ ಪ್ರತೀಕ್ಷಾ ಕಡ್ಲೆ ಮತ್ತು ಅಣ್ಣಪ್ಪ ದೇವಾಡಿಗ ಅವರು ಅನೇಕ ದೇವಿಯ ಭಕ್ತಿ ಗೀತೆಗಳನ್ನು ಹಾಡಿದರು.
ಉಮೇಶ ಮುಂಡಳ್ಳಿಯವರೊಂದಿಗೆ ಕೊಳಲು ವಾದನದಲ್ಲಿ ವಿನಾಯಕ ಭಂಡಾರಿ, ತಬಲಾದಲ್ಲಿ ನವೀನ್ ಶೇಟ್, ಹಾರ್ಮೋನಿಯಂನಲ್ಲಿ ಪರಮೇಶ್ವರ ಹೆಗಡೆ ಮತ್ತು ಕಿಂಜರದಲ್ಲಿ ಗೋಪಾಲ್ ನಾಯ್ಕ ಸಾಥ್ ನೀಡಿದರು. ಕೊನೆಯಲ್ಲಿ ಕ್ಷೇತ್ರದ ಆಡಳಿತ ಮಂಡಳಿಯ ಸದಸ್ಯರು ಉಮೇಶ ಮುಂಡಳ್ಳಿಯವರನ್ನು ಸಾಲು ಹೊದಿಸಿ ಗೌರವಿಸಿದರು.