ಬೀರ ಗೌಡ ನಿಧನ
ಗೋಕರ್ಣ: ಹತ್ತಿರದ ಮೂಲೆಕೇರಿಯ ಹಿರಿಯ ಶ್ರೀ ಗುಡ್ಡೆ ಹೊನ್ನಪ್ಪ ದೇವಸ್ಥಾನದ ಮುಖ್ಯ ಮುದ್ರೆದಾರರಾಗಿದ್ದ ಬೀರ ಗೋವಿಂದ ಗೌಡ ಮೃತರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮಗ ಮಗಳನ್ನು
ಅಗಲಿದ್ದಾರೆ. ಇವರು ಕಳೆದ ವರ್ಷದಿಂದ ಶ್ರೀ ದೇವರ ಕೈಂಕರ್ಯ ಉತ್ತಮವಾಗಿ ನಿರ್ವಹಿಸಿದ್ದರು ಎಂದು ಮೊಕೇಸರ್ ಬೊಮ್ಮಯ್ಯ ಗಾಂವಕರ ಸ್ಮರಿಸಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ.
ಯಾದು ಹರಿಕಂತ್ರ
ಅಂಕೋಲಾ: ಇಲ್ಲಿಯ ಬಿಳೇಹೊಂಯ್ದಿ ಗ್ರಾಮದ ಸರಳ, ಸಜ್ಜನ ವ್ಯಕ್ತಿತ್ವದ ಯಾದು ನಾರಾಯಣ ಹರಿಕಂತ್ರ (57) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಅಘಾದವಾದ ಓದು ಹಾಗೂ ಸಮಾಜದ ಆಗುಹೋಗುಗಳ ಬಗ್ಗೆ ತೀಕ್ಷ್ಮವಾಗಿ ಚರ್ಚಿಸುತ್ತಿದ್ದ, ಅಪರೂಪದ ವ್ಯಕ್ತಿತ್ವವುಳ್ಳವರಾಗಿದ್ದರು. ಸಾಮಾಜಿಕ ಸೇವೆಯಲ್ಲಿಯೂ ಸಹ ತಮ್ಮನ್ನು ತೊಡಗಿಸಿಕೊಂಡಿದ್ದರು. ತಮ್ಮ ಗ್ರಾಮದಲ್ಲಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಸಹಾಯಕರಿಗೆ ಸದಾ ಸಹಾಯ ನೀಡುತ್ತಿದ್ದರು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಸಹೋದರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಊರಿನ ನಾಗರಿಕರು ಹಾಗೂ ಗಣ್ಯಾತಿ ಗಣ್ಯರು ಸಂತಾಪ ಸಲ್ಲಿಸಿದ್ದಾರೆ.