ಕಾರವಾರ: ಮಾನಸಿಕ ಅಸ್ವಸ್ಥನೋರ್ವ ಒಂದು ವರ್ಷದ ಹಿಂದೆ ಮನೆಯಿಂದ ಹೊರ ಹೋಗಿ ನಾಪತ್ತೆಯಾಗಿದ್ದು ಆತನ ಪತ್ತೆಗೆ ಸಹಕರಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಶಿರಸಿ ತಾಲೂಕಿನ ಬನವಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ಮಳಲಗಾಂವ ಬುಗುಡಿಕೊಪ್ಪದ ರಾಮಚಂದ್ರ ರಾಮ ಭೋವಿವಡ್ಡರ(48) ನಾಪತ್ತೆಯಾದ ವ್ಯಕ್ತಿಯಾಗಿದ್ದಾನೆ. ಕಳೆದ 1 ವರ್ಷದಿಂದ ಸ್ವಲ್ಪ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದ ಇವರನ್ನು ಆಸ್ಪತ್ರೆಗಳಲ್ಲಿ ಔಷಧೋಪಚಾರ ಮಾಡಿಸಲಾಗಿತ್ತು.

2021ರ ಅಕ್ಟೋಬರ್ 3ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದ ಮನೆಯಿಂದ ಹೊರಗೆ ಹೋದವರು ಈ ವರೆಗೂ ಮನೆಗೂ ಬರದೇ ಕಾಣೆಯಾಗಿದ್ದಾರೆ ಎಂದು ಕಾಣೆಯಾದ ವ್ಯಕ್ತಿಯ ಪತ್ನಿ ಸುಮಲತಾ ರಾಮಚಂದ್ರ ಭೋವಿವಡ್ಡರ 2022ರ ಅಕ್ಟೋಬರ್ 29 ರಂದು ಬನವಾಸಿ ಪೊಲೀಸ್ ಠಾಣಿಯಲ್ಲಿ ದೂರು ನೀಡಿದ್ದು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಲಾಗಿದೆ. ಕಾಣೆಯಾದ ವ್ಯಕ್ತಿಯು ಎತ್ತರ 5 ಪೂಟ್ 8 ಇಂಚು ದುಂಡನೆಯ ಮುಖ, ಗೋಧಿ ಮೈಬಣ್ಣ, ಕಪ್ಪು ಕೂದಲು ಹೊಂದಿದ್ದು, ಕನ್ನಡ ಹಿಂದಿ ತೆಲಗು, ತಮಿಳು ಭಾಷೆ ಮಾತನಾಡುತ್ತಾರೆ.

RELATED ARTICLES  ಕೋಟಿ ಹಣದ ಒಡತಿಯಾದರೂ ಸರಳತೆಗೆ ಸಾಕ್ಷಿ ಸುಧಾಮೂರ್ತಿ!

ಮನೆಯಿಂದ ಹೊರಹೋಗುವಾಗ ನೀಲಿ ಬಣ್ಣದ ಚೆಕ್ ಶರ್ಟ್, ಆಕಾಶ ನೀಲಿ ಚಕ್ಸ್ ಲುಂಗಿ, ಗೋದಿ ಬಣ್ಣದ ಟವೆಲ್ ಧರಿಸಿದ್ದರು. ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ಪೊಲೀಸ್ ವೃತ್ತ ನಿರೀಕ್ಷಕರು ಶಿರಿಸಿ ರವರಿಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಮಾಜಿ ಪ್ರೇಯಸಿಗೆ 144 ಉತ್ತಮ ಸಂದೇಶ ಕಳಿಸುವಂತೆ ತೀರ್ಪು!