ಗೋಕರ್ಣ: ಜೀವನದಲ್ಲಿ ಜಿಗುಪ್ಪೆಗೊಂಡು ನೇಣು ಬಿಗಿದು ವ್ಯಕ್ತಿಯೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹನೇಹಳ್ಳಿಯಲ್ಲಿ ಸೋಮವಾರ ನಡೆದಿದೆ. ಅಂಬೇಡ್ಕರ ಕಾಲೋನಿ ಮುರ್ಕುಂಡೇಶ್ವರ ಗುಡ್ಡದ ನಿವಾಸಿ ಶಿವಾನಂದ ಬೀರಾ ಆಗೇರ (49) ಆತ್ಮಹತ್ಯೆ ಮಾಡಿಕೊಂಡವರಾಗಿದ್ದು, ಮೂರು ವರ್ಷದಿಂದ ಹೊಟ್ಟೆನೋವು, ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದು, ಗುಣಮುಖವಾಗದ ಕಾರಣ ಈ ಕೃತ್ಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ರೈಲ್ವೆಯಿಂದ ಆಯತಪ್ಪಿ ಬಿದ್ದು ಯುವಕ ಸಾವು