ಅಂಕೋಲಾ : ಇದೀಗ ಎಲ್ಲೆಡೆಯಲ್ಲಿಯಲ್ಲಿಯೂ ಅಯ್ಯಪ್ಪನ ಆರಾಧನೆಯೇ ನಡೆಯುತ್ತಿದೆ. ಅಯ್ಯಪ್ಪ ಮೂಲಾಧಾರಿಗಳು ಕಠಿಣ ವೃತ ಕೈಗೊಂಡು ಆರಾಧನೆ, ಪೂಜೆ ಪುನಸ್ಕಾರದಲ್ಲಿ ತೊಡಗಿಕೊಂಡಿರುತ್ತಾರೆ. ಈ ಆರಾಧನೆಯ ಸಂದರ್ಭದಲ್ಲಿ ಪಟ್ಟಣದ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಕುದಿಯುವ ಎಣ್ಣೆ ಬಾಣಲಿಯಿಂದ ಬರಿಗೈಯಲ್ಲಿ ವಡೆಯನ್ನು ತೆಗೆದು ಅಯ್ಯಪ್ಪ ಮಾಲಾಧಾರಿಗಳು ಭಕ್ತಿ ಪರಾಕಾಷ್ಠೆ ಮೆರೆದರು.
ಪಟ್ಟಣದ ಕಣಕಣೇಶ್ವರ ದೇವಸ್ಥಾನದ ಅಯ್ಯಪ್ಪ ಮಾಲಾಧಾರಿಗಳು ಕಳೆದ ಕೆಲದಿನಗಳಿಂದ ಅಯ್ಯಪ್ಪ ಸ್ವಾಮಿಯ ವೃತಾಚರಣೆಯನ್ನು ಆರಂಭಿಸಿದ್ದಾರೆ. ಈ ನಿಮಿತ್ತ ಪಟ್ಟಣದಲ್ಲಿ ಅಯ್ಯಪ್ಪ ಸ್ವಾಮಿಯ ಮೆರವಣಿಗೆಯನ್ನು ನಡೆಸಿದರು. ಹಾಗೆ ತಮ್ಮ ಅಯ್ಯಪ್ಪ ಸ್ವಾಮಿ ಸನ್ನಿದಾನದಲ್ಲಿ ಅಯ್ಯಪ್ಪ ಸ್ವಾಮಿಗೆ ವಿಷೇಶ ಪೂಜೆಯನ್ನು ಸಲ್ಲಿಸಿ ಕುದಿಯುವ ಎಣ್ಣೆ ಬಾಣಲಿಯಿಂದ ಬರಿಗೈಯಲ್ಲಿ ವಡೆಯನ್ನು ತೆಗೆಯುವ ಸೇವೆಯನ್ನು ಮಾಡಿದರು. ಇದರಲ್ಲಿ ಚಿಕ್ಕ ಮಕ್ಕಳು ಕೂಡ ಭಾಗಿಯಾಗಿದ್ದು ವಿಶೇಷವಾಗಿತ್ತು.
ಈ ಸುದ್ದಿಗಳನ್ನೂ ಓದಿ.