ಕಾರವಾರ : ತಾಲೂಕಿನ ಮಲ್ಲಾಪುರದಲ್ಲಿ ನಡೆದ ಭೀಕರ ಅಪಘಾತದಲ್ಲಿ ಯುವಕನೋರ್ವ ಸಾವುಕಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸರಣಿ ವಾಹನ ಅಪಘಾತ ಇದಾಗಿದ್ದು, ಕಾರ್, ಬಸ್, ಬೈಕ್ ನಡುವೆ ಸರಣಿ ಅಪಘಾತ ನಡೆದು ಬೈಕ್ ಬಸ್ಸಿನ ಚಕ್ರದಡಿ ಸಿಲುಕಿದ ಘಟನೆ ನಡೆದಿದೆ.

RELATED ARTICLES  ಹೊಸ ಹೆರವಟ್ಟಾ ರೋಡಿಗೆ  ಸಿಗುವುದೇ ಕಾಯಕಲ್ಪ?

ಬೈಕ್ ಸವಾರ ಸ್ಥಳದಲ್ಲೇ ಸಾವುಕಂಡಿದ್ದು ಸತ್ಯಂ ಗೋವಿಂದ (19) ಸಾವನ್ನಪ್ಪಿದ ಯುವಕನಾಗಿದ್ದು ಮಲ್ಲಾಪುರದಿಂದ ಬೈಕ್ ನಲ್ಲಿ ಅತೀ ವೇಗದಲ್ಲಿ ಬರುತಿದ್ದಾಗ ಓವರ್ ಟೇಕ್ ಮಾಡಲು ಹೋಗಿ ಬಸ್ಸಿನ ಚಕ್ರದಡಿ ಸಿಲುಕಿ ಸಾವು ಕಂಡಿದ್ದಾನೆ.

RELATED ARTICLES  ಸರಕಾರದಿಂದ ಅಂಗವಿಕಲರ ನಿರ್ಲಕ್ಷ್ಯ-ಕುಮಟಾದಲ್ಲಿ ಮನವಿ ಸಲ್ಲಿಕೆ.

ಸ್ಥಳಕ್ಕೆ ಕದ್ರ ಪೊಲೀಸ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಶವವನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.