ಹೊನ್ನಾವರ: ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಮತ್ತೆ ವರದಿಯಾಗುತ್ತಿದ್ದು, ಚಾಲಾಕಿ ಕಳ್ಳರು ಅಂಗಡಿಗೆ ಕಳ್ಳತನಕ್ಕೆ ಕೈ ಹಾಕುತ್ತಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದೀಗ ಫುಲ್ ವೈರಲ್ ಆಗಿದೆ. ತಾಲೂಕಿನ ಹಳದಿಪುರದ ಚಿಪ್ಪಿಹಕ್ಕಲ ಕ್ರಾಸನಲ್ಲಿರುವ ಅಂಗಡಿವೊoದರಲ್ಲಿ ತಡರಾತ್ರಿ ಕಳ್ಳತನವಾಗಿದೆ. ಅಂಗಡಿಗೆ ಬಂದ ಆಗುಂತಕ,ಅoಗಡಿಯ ಹಿಂದಿನ ಗೊಡೆಗೆ ಅಳವಡಿಸಿದ ಕಿಟಕಿಯ ಕಟ್ಟಿಗೆ ಗೂಟವನ್ನು, ಯಾವುದೋ ಗಟ್ಟಿಯಾದ ವಸ್ತುವಿನಿಂದ ಒಡೆದು ಒಳಗೆ ಬಂದು ತನ್ನ ಅಟ್ಟಹಾಸ ಮೆರೆದಿದ್ದಾನೆ. ಅಂಗಡಿಯಲ್ಲಿದ್ದ 3,700 ನಗದು ಕಳ್ಳತನವಾಗಿದೆ. ಈ ಹಿಂದೆ ಹಲವಾರು ಕಳ್ಳತನದಲ್ಲಿ ಭಾಗಿಯಾದ ಕಳ್ಳನಿರಬಹುದೆಂದು ಅಂದಾಜಿಸಲಾಗಿದೆ. ಶೀಘ್ರವಾಗಿ ಕಳ್ಳನ ಪತ್ತೆಹಚ್ಚಿ ಎಂದು ಅಂಗಡಿ ಮಾಲೀಕ ಚಂದ್ರಕಾoತ ಭಂಡಾರಿ ಪ್ರಕರಣ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಸಿಸಿ ಕ್ಯಾಮರಾ ದ್ರಶ್ಯಾವಳಿ ಸಂಗ್ರಹಿಸಿ,ಹೆಚ್ಚಿನ ಮಾಹಿತಿ ಕಲೆಹಾಕಿದ್ದಾರೆ. ಪದೇ ಪದೇ ಅಂಗಡಿ ಕಳ್ಳತನವಾದರು ಪೊಲೀಸರು ಕಳ್ಳನ ಪತ್ತೆ ಹಚ್ಚಲು ಸಾಧ್ಯವಾಗದಿರುವ ಬಗ್ಗೆ ಭೇಸರ ವ್ಯಕ್ತಪಡಿಸಿದ್ದು ಶೀಘ್ರವಾಗಿ ಕಳ್ಳನ ಪತ್ತೆಹಚ್ಚಿ ಎಂದು ಅಂಗಡಿ ಮಾಲೀಕ ಚಂದ್ರಕಾoತ ಅವರು ಆಗ್ರಹಿಸಿದ್ದಾರೆ.