ಕುಮಟಾ : ತಾಲೂಕಿನ ಮೂರೂರು ರಸ್ತೆಯಲ್ಲಿ ನಡೆದ ಬೈಕ್ ಹಾಗೂ ಸೈಕಲ್ ನಡುವಿನ ಅಪಘಾತದಲ್ಲಿ, ಬೈಕ್ ಸವಾರ ಬಲವಾಗಿ ಪೆಟ್ಟು ಬಿದ್ದು ಕೊನೆಯುಸಿರು ಎಳೆದ ಘಟನೆ ವರದಿಯಾಗಿದೆ. ಮೂರುರೂ ಘಟ್ಟದ ಮೇಲಿನ ತಿರುವಿನಲ್ಲಿ ಸೈಕಲ್ ಹಾಗೂ ಬೈಕ್ ನಡುವೆ ಅಪಘಾತದಲ್ಲಿ ಬೈಕ್ ಸವಾರ ಮಹೇಶ ಸುರೇಶ ಗೌಡನ ತಲೆಗೆ ಬಲವಾದ ಗಾಯಗೊಂಡಿದ್ದ.
ಅಪಘಾತದಲ್ಲಿ ಗಾಯಗೊಂಡ ಮಹೇಶ ಸುರೇಶ ಗೌಡನನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೈಕಲ್ ಸವಾರನಿಗೆ ಕಾಲಿನ ಮೂಳೆ ಮುರಿದು ಕಾರವಾರ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ.