ಹೊನ್ನಾವರ : ತಾಲೂಕಿನ ಸೇಂಟ್ ಇಗ್ಲೀಶಿಯಸ್ ಆಸ್ಪತ್ರೆಯ ಸಿಬ್ಬಂದಿಗಳು ಅನಾಥ ವೃದ್ಧೆಗೆ 6 ತಿಂಗಳು ಉಚಿತ ಚಿಕಿತ್ಸೆ ನೀಡಿದ್ದಲ್ಲದೆ ನಿಧನರಾದ ವೃದ್ಧೆಯ ಶವ ಸಂಸ್ಕಾರವನ್ನೂ ನೆರವೇರಿಸಿ, ಮಾನವೀಯತೆ ಮೆರೆದಿದ್ದಾರೆ. ಕಮಲಾಬಾಯಿ ಎಂಬ ಹೆಸರಿನ ಮಹಿಳೆ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದಳು. 6 ತಿಂಗಳ ಹಿಂದೆ ಇನ್ನೇಶಿಯಸ್ ಆಸ್ಪತ್ರೆಗೆ ದಾಖಲಾದ ವೃದ್ಧೆಗೆ ಕ್ಯಾನ್ಸರ್ ತಜ್ಞ ಡಾ. ವಿಶ್ವಾಸ ಪೈ ಮತ್ತು ಡಾ.ಅಶೋಕ ಯರಗುಡ್ಡಿ ಚಿಕಿತ್ಸೆ ನೀಡಿದ್ದರು.

RELATED ARTICLES  ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ?ಯಾವ ರಾಶಿಯವರಿಗೆ ಏನು ಫಲ? ಅದೃಷ್ಟ ಸಂಖ್ಯೆ ಯಾವುದು? ದಿನಾಂಕ 25/09/2018 ರ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ …

ತಾನು ನಿಧನರಾದರೆ ಶವ ಸಂಸ್ಕಾರವನ್ನು ನೀವೇ ಮಾಡಿ, ನನ್ನ ಆಸ್ತಿಯನ್ನು ನೀವೇ ತೆಗೆದುಕೊಳ್ಳಿ ಎಂದು ಹೇಳಿದ್ದಳು. ಶವ ಸಂಸ್ಕಾರಕ್ಕೆ ಬಂಧುಗಳು ಬರದ ಕಾರಣ ಉಮೇಶ ಕಾಮತ ಎಂಬುವವರ ಸಹಕಾರದಿಂದ ಆಸ್ಪತ್ರೆಯ ಸಿಬ್ಬಂದಿಗಳೇ ಶವ ಸಂಸ್ಕಾರ ನೆರವೇರಿಸಿದ್ದು, ಮೃತರ ಆಸ್ತಿ ನಮಗೆ ಬೇಡ ಅದನ್ನು ಅವರ ಅಧಿಕೃತ ವಾರಸುದಾರರು ಪಡೆದುಕೊಳ್ಳಲಿ ಎಂದು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆ್ಯಂಟನಿ ಲೋಪಿಸ್ ಹೇಳಿದ್ದಾರೆ.

RELATED ARTICLES  ಬಸ್ ಹಾಗೂ ಕಾರಿನ ನಡುವೆ ಅಪಘಾತ : ಐದು ಜನ ಸಾವು.

ಮಾನವೀಯ ಕಾಳಿಜಿಯ ಇಂತಹ ಹಲವು ಸೇವೆಯನ್ನು ಇನ್ನೇಶಿಯಸ್ ಆಸ್ಪತ್ರೆಯ ಸಿಬ್ಬಂದಿಗಳು ಮಾಡುತ್ತಿರುದರಿಂದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.