ಭಟ್ಕಳ : ಡಿಸೆಂಬರ್ ಸಂದರ್ಭದಲ್ಲಿ ಪ್ರವಾಸಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚು ಹಾಗೂ ಅದರ ಅಪಾಯಗಳೂ ಹೆಚ್ಚು, ಭಟ್ಕಳ ತಾಲೂಕಿನ
ಮುರುಡೇಶ್ವರದಲ್ಲಿ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ನೀರುಪಾಲಾಗಿರುವ ಘಟನೆ ವರದಿಯಾಗಿದೆ.

ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಅರಬ್ಬಿ ಸಮುದ್ರದಲ್ಲಿ ಅಲೆಗೆ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ. ಫಯಾಜ್ (14) ಸಾವನ್ನಪ್ಪಿದ ವಿದ್ಯಾರ್ಥಿ. ಚಿತ್ರದುರ್ಗದಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳ ತಂಡದ ಪೈಕಿ ಫಯಾಜ್ ಈಜಲು ಸಮುದ್ರಕ್ಕೆ ಇಳಿದಾಗ ದುರ್ಘಟನೆ ಸಂಭವಿಸಿದೆ.

RELATED ARTICLES  ಕುಮಟಾ - ಬಾಡದ ರೆಸಾರ್ಟನಲ್ಲಿ ಅಕ್ರಮ ಚಟುವಟಿಕೆ - ಪೊಲೀಸ್ ದಾಳಿ - ವೇಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿ.

ಸ್ಥಳಕ್ಕೆ ಕರಾವಳಿ ಕಾವಲು ಪಡೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರವಾಸಕ್ಕೆ ತೆರಳುವ ಸಂದರ್ಭದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಅಗತ್ಯತೆ ಇದೆ. ಅವುಗಳನ್ನು ಮೀರಿದ್ದರೆ ಅಪಾಯ ಕಟ್ಟಿಟ್ಟ ಬುಟ್ಟಿ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ.

RELATED ARTICLES  ಬಸ್ ನಲ್ಲಿ ಯುವತಿಯ ಫೋಟೋ ತೆಗೆದಾತನಿಗೆ ಬಿತ್ತು ಧರ್ಮದೇಟು.