ಶಿರಸಿ : ತಾಲೂಕಿನ ಪಾಂಡವರ ಹೊಳೆಬಳಿ ಪ್ರವಾಸಿಗರಿಗೆ ದಾರಿ ತೋರಿಸಲು ಹೋಗಿದ್ದ ವ್ಯಕ್ತಿಯೋರ್ವ ಹೊಳೆಯಲ್ಲಿ ಜಾರಿಬಿದ್ದು ನೀರಿನಲ್ಲಿ ಮುಳುಗಿ ಸಾವು ಕಂಡ ಘಟನೆ ಸಂಭವಿಸಿದೆ. ಗುರುಪಾದ ರಾಮಚಂದ್ರ ಹೆಗಡೆ (53) ಎಂಬುವವರೆ ಸಾವು ಕಂಡ ದುರ್ದೈವಿಯಾಗಿದ್ದಾನೆ. ಇವರು ಕಳೆದ ಬುಧವಾರ ಮಧ್ಯಾಹ್ನದ ಸುಮಾರಿಗೆ ಪಾಂಡವರ ಹೊಳೆಯನ್ನು ವೀಕ್ಷಿಸಲು ಬಂದಿದ್ದ ಪ್ರವಾಸಿಗರಿಗೆ ದಾರಿ ತೋರಿಸಲು
ಹೋಗಿದ್ದರು.ಈ ಸಂದರ್ಭದಲ್ಲಿ ಹೊಳೆಯ ಅಂಚಿನಲ್ಲಿದ್ದ ಕಲ್ಲಿನ ಮೇಲೆ ನಿಂತು ಪಾಂಡವರ ಹೊಳೆಯ ಮಾಹಿತಿಯನ್ನು ಪ್ರವಾಸಿಗರಿಗೆ ನೀಡುತ್ತಿರುವಾಗ ಕಲ್ಲಿನಿಂದ ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವು ಕಂಡಿದ್ದಾರೆ.
ಈ ಕುರಿತು ಶಿರಸಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್‌ಐ ಈರಯ್ಯ ತನಿಖೆ ಕೈಗೊಂಡಿದ್ದಾರೆ.