ಹೊನ್ನಾವರ: ಜಿ.ಪಂ. ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಅವರ ನಿವಾಸದಲ್ಲಿ ದಕ್ಷಿಣೋತ್ತರ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಭೀಷ್ಮ ವಿಜಯ’ ತಾಳಮದ್ದಳೆ ಕಾರ್ಯಕ್ರಮ ಜರುಗಿತು.
ಕಡತೋಕಾದ ಹೆಗಡೆಮನೆಯಲ್ಲಿ ದಿ.ರಾಮಚಂದ್ರ ಹೆಗಡೆಯವರ ದ್ವಿತೀಯ ಪುಣ್ಯತಿಥಿಯ ಪ್ರಯುಕ್ತ ಜರುಗಿದ ತಾಳಮದ್ದಳೆಯ ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರು, ಪರಮೇಶ್ವರ ಭಂಡಾರಿ ಕರ್ಕಿ, ಸುನೀಲ ಭಂಡಾರಿ ಕಡತೋಕಾ, ಸುಜನ್ ಹಾಲಾಡಿ, ಮುಮ್ಮೇಳದಲ್ಲಿ ಉಜಿರೆ ಅಶೋಕ ಭಟ್, ಜಬ್ಬಾರ ಸಮೊ ಸಂಪಾಜೆ, ಪವನ ಕಿರಣಕೆರೆ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದರು. ಹೆಗಡೆಮನೆಯ ಸೂರ್ಯನಾರಾಯಣ ಹೆಗಡೆ ಮತ್ತು ಶಿವಾನಂದ ಹೆಗಡೆ ಸರ್ವರನ್ನು ಸ್ವಾಗತಿಸಿ ಅಭಿನಂದಿಸಿದರು.

RELATED ARTICLES  ವಿನೂತನವಾಗಿ ವಿಶ್ವ ಪರಿಸರ ದಿನ ಆಚರಿಸಿದ ಗುಡಿಗಾರಗಲ್ಲಿ ಶಾಲಾ ವಿದ್ಯಾರ್ಥಿಗಳು