ಭಟ್ಕಳ: ಮನೆಯ ಪಕ್ಕ ಸಮುದ್ರ ತೀರಕ್ಕೆ ಹೊಂದಿಕೊಂಡ ರಸ್ತೆಯಂಚಿನಲ್ಲಿ ಕುಳಿತಿದ್ದ ಯುವಕನ ಕೈಯಲ್ಲಿದ್ದ ಮೊಬೈಲ್ ಫೋನ್‌ವೊಂದನ್ನು ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಯುವಕರ ತಂಡವೊಂದು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಮುಂಡಳ್ಳಿ ನಸ್ತಾರ ಸಮೀಪ ಗುರುವಾರ ರಾತ್ರಿ ನಡೆದಿದೆ. ಮೊಬೈಲ್ ಫೋನ್ ಕಳೆದುಕೊಂಡ ಯುವಕನನ್ನು ತಾಲೂಕಿನ ಮುಂಡಳ್ಳಿ ಬೇಲೆಗದ್ದೆ ನಿವಾಸಿ ಯಶ್ವಂತ ಈರಯ್ಯ ದೇವಡಿಗ ಎಂದು ಗುರುತಿಸಲಾಗಿದೆ.
ಈತ ಮಾಮೂಲಿಯಂತೆ ಸಮುದ್ರ ತೀರದ ರಸ್ತೆಯಂಚಿನ ಆಸನದಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಅನಾಮಿಕರು ಕುಕೃತ್ಯ ಎಸಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಾಲೂಕಿನ ವಿವಿಧ ಬೀಚ್‌ಗಳಲ್ಲಿ ಗಾಂಜಾದಂತಹ ಮಾದಕ ವಸ್ತು ಸೇವನೆ ಹೆಚ್ಚಾಗುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಮಾದಕ ವಸ್ತು ಸೇವಿಸಿದ ಯುವಕರು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ. – ಇದ್ದಕ್ಕಿದ್ದಂತೆ ಹೊತ್ತಿ ಉರಿದುಹೋಯ್ತು ಲಾರಿ.
ಈ ಕುರಿತು ಭಟ್ಕಳ ಗ್ರಾಮೀಣ ಠಾಣಾ ಪೊಲೀಸರಿಗೆ ದೂರು ನೀಡಲಾಗಿದ್ದು, ಎಸ್‌ಐ ಭರತ್ ತನಿಖೆ ಕೈಗೊಂಡಿದ್ದಾರೆ.