ನ್ಯೂಸ್ ಡೆಸ್ಕ್ : ಸೋನಿ ಎಸ್‌ಎಬಿ ಟಿವಿ ಧಾರಾವಾಹಿ ‘ಅಲಿಬಾಬಾ: ದಸ್ತಾನ್ ಇ ಕಾಬೂಲ್’ ನಾಯಕ ನಟಿ ತುನೀಶಾ ಶರ್ಮಾ ಟಿವಿ ಧಾರಾವಾಹಿಯ ಸೆಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲಾಗಲೇ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಸದ್ಯ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಇದೇ ವೇಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED ARTICLES  ಪರಿವರ್ತನ ರಥಯಾತ್ರೆ : ಬೃಹತ್‌ ಸಮಾವೇಶಕ್ಕೆ ತಯಾರಿ

ತುನೀಶಾಗೆ ಕೇವಲ 20 ವರ್ಷ. ಅವರು ಬಾಲ ಕಲಾವಿದರಾಗಿ ಉದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ‘ಭಾರತ್ ಕಾ ವೀರ್ ಪುತ್ರ ಮಹಾರಾಣಾ ಪ್ರತಾಪ್’ ಧಾರಾವಾಹಿಯಲ್ಲಿ ಪಾದಾರ್ಪಣೆ ಮಾಡಿದರು. ತುನೀಶಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭಿವಾಡಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮಾಹಿತಿಯ ಪ್ರಕಾರ, ತುನಿಶಾ ಪ್ರಸ್ತುತ ಸೋನಿ ಎಸ್‌ಎಬಿ ಟಿವಿಯ ಧಾರಾವಾಹಿ ‘ಅಲಿ ಬಾಬಾ: ದಾಸ್ತಾನ್ ಇ ಕಾಬೂಲ್’ ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ಅವರು ಶೆಹಜಾದಿ ಮರ್ಯಮ್ ಪಾತ್ರ ನಿಭಾಯಿಸುತ್ತಿದ್ದರು. ಇದಲ್ಲದೆ, ಅವರು ಫಿತೂರ್, ಬಾರ್ ಬಾರ್ ದೇಖೋ, ಕಹಾನಿ 2: ದುರ್ಗಾ ರಾಣಿ ಸಿಂಗ್, ದಬಾಂಗ್ 3 ಮುಂತಾದ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಫಿತೂರ್ ಮತ್ತು ಬಾರ್ ಬಾರ್ ದೇಖೋದಲ್ಲಿ ತುನಿಶಾ ಕತ್ರಿನಾ ಕೈಫ್ ಅವರ ಹದಿಹರೆಯದ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಲ್ಲದೇ ‘ಇಂಟರ್ನೆಟ್ ವಾಲಾ ಲವ್’ ಧಾರಾವಾಹಿಯಲ್ಲಿ ತನಿಶಾ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

RELATED ARTICLES  ಪ್ರತ್ಯೇಕ ಲಿಂಗಾಯಿತ ಧರ್ಮದ ಪ್ರಸ್ತಾವನೆಗೆ ಕೇಂದ್ರದಿಂದ ರೆಡ್ ಸಿಗ್ನಲ್.!?