ಕಾರವಾರ: ರಾಮನಗರದ ಪಾಟೀಲ ನಾಕಾದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ತಪಾಸಣಾ ಕೇಂದ್ರದ ಕಟ್ಟೆಯ ಮೇಲೆ ಕುಳಿತ ಸ್ಥಿತಿಯಲ್ಲೇ ಡಿಸೆಂಬರ್ 21 ರಂದು ಮೃತಪಟ್ಟಿದ್ದು, ಮೃತನು 30 ರಿಂದ 35 ರ ಪ್ರಾಯದವರಾಗಿರುತ್ತಾರೆ, 5 ಅಡಿ ಎತ್ತರ, ಗೋದಿ ಬಣ್ಣ ಸಾದಾರಣ ಮೈಕಟ್ಟು, ಮತ್ತು ತಿಳಿ ಗುಲಾಬಿ ಬಣ್ಣದ ಪೂರ್ಣ ತೋಳಿನ ಶರ್ಟ್, ಬಿಳಿ ಹಾಗೂ ತಿಳಿ ಹಸಿರು ಬಣ್ಣದ ಪಟ್ಟಿಗಳಿಂದ ಕೂಡಿದ ಸ್ವೆಟರ್ ಮತ್ತು ನೀಲಿ ಬಣ್ಣದ ಬರ್ಮುಡಾ ಮತ್ತು ಟಾವೆಲ್ ಧರಿಸಿರುತ್ತಾರೆ. ಫಿರ್ಯಾದಿ ಶ್ರೀ ಆಕಾಶ ತಂದೆ ಪ್ರಭಾಕರ ಸಾವಂತ’ ಚರ್ಚಗಲ್ಲಿ, ರಾಮನಗರ ಜೋಯಿಡಾ ಇವರು ಡಿಸೆಂಬರ್ 22 ಬೆಳಿಗ್ಗೆ 08-00 ಗಂಟೆಗೆ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಒಬ್ಬ ವ್ಯಕ್ತಿ ಕುಳಿತ್ತಲೇ ಸತ್ತಿರುವದ್ದನ್ನು ನೋಡಲಾಗಿ ಅವನು ಸ್ಥಳೀಯ ವ್ಯಕ್ತಿ ಅಲ್ಲವೆಂದು ತಿಳಿದು, ಮೃತ ಅಪರಿಚಿತ ಅಥವಾ ಇತರ ವ್ಯಕ್ತಿಯು ಯಾವುದೋ ಅನಾರೋಗ್ಯ ಕಾರಣದಿಂದ ಮೃತಪಟ್ಟಿರುವಂತೆ ಕಂಡು ಬರುತ್ತದೆ ಎಂದು ತಿಳಿಸಿದ್ದಾರೆ.
ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.