ಬೆಂಗಳೂರು:ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ರಾಜಕೀಯ ಪಕ್ಷ ಘೋಷಿಸಿದ್ದಾರೆ. ಬಿಜೆಪಿ ವಿರುದ್ಧ ತೊಡೆತಟ್ಟಿರುವ ರೆಡ್ಡಿ ಪಕ್ಷಕ್ಕೆ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೆಸರು ಇರಿಸಲಾಗಿದೆ ಎಂದು ಹೇಳಿದರು. ರೆಡ್ಡಿ ನಿವಾಸ ‘ಪಾರಿಜಾತ’ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಬಳ್ಳಾರಿ ಜನರ ಸೇವೆಗೆ ನಾನು ಸದಾ ಸಿದ್ಧ ಎಂದು ಅಟಲ್ ಬಿಹಾರಿ ವಾಜಪೇಯಿ ಪ್ರತಿಮೆಯ ಮುಂದೆ ಹೇಳಿದರು.
ಇಂದು ಭಾರತ ಕಂಡ ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಎಲ್ಲರಿಗೂ ಕ್ರಿಸ್ಮಸ್ ಹಬ್ದದ ಶುಭಾಶಯಗಳು. ಅಣ್ಣ ಬಸವಣ್ಣನವರ ವಚನ ಕಾಯಕವೇ ಕೈಲಾಸದ ತತ್ವ ನಂಬಿದವನು ನಾನು. ಶ್ರದ್ಧೆಯಿಂದ ಕೆಲಸ ಮಾಡಿಕೊಂಡು ಈವರೆಗೆ ಬಂದು ತಲುಪಿದ್ದೇನೆ ಎಂದು ಹೇಳಿದ್ದಾರೆ.
ಸತ್ಯದ ವಿಚಾರವನ್ನೇ ಹೇಳಿಕೊಂಡು ಬಂದಿದ್ದೇನೆ. ನನ್ನ 21ನೇ ವಯಸ್ಸಿನಲ್ಲಿ ಇನೋಬ್ಲಿಟಿ ಸಂಸ್ಥೆ ಆರಂಭಿಸಿದ್ದೆ. ನನ್ನ ಮೈನಿಂಗ್ ಕಂಪನಿಯಲ್ಲಿ ದೇವರು ಕೇಳಿಕೊಂಡಿದ್ದಕ್ಕೂ ಹೆಚ್ಚು ಕೊಟ್ಟಿದ್ದಾನೆ ಎಂದು ಹೇಳಿದ್ದಾರೆ.