ಭಟ್ಕಳ: ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ಇವರ ನಿನಾದ ದಸರಾ ಕಾವ್ಯೋತ್ಸವವು ಅ.7ರಂದು ಶನಿವಾರ ಮದ್ಯಾಹ್ನ 2.30 ಕ್ಕೆ ಚಿತ್ರಾಪುರದ ಶ್ರೀಮದ್ ಪರಿಜ್ಞಾಶ್ರಮ ಸಭಾಭವನ ಚಿತ್ರಾಪುರದಲ್ಲಿ ನಡೆಯಲಿದೆ. ದಸರಾ ಕಾವ್ಯೋತ್ಸವವನ್ನು ಹಿರಿಯ ಸಾಹಿತಿ ಉತ್ತರ ಕನ್ನಡ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಮಾಸ್ಕೇರಿ ಎಂ.ಕೆ.ನಾಯಕ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಬಿ.ಪಿ. ಶಿವಾನಂದ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ಜನತಾ ವಿದ್ಯಾಲಯ ಶಿರಾಲಿಯ ಪ್ರಾಚಾರ್ಯ ಅಮೃತ್ ಬಿ.ರಾಮರಥ್, ಚಿತ್ರಾಪುರ ಮಠದ ವ್ಯವಸ್ಥಾಪಕ ನಾರಾಯಣ ಮಲ್ಲಾಪುರ ಮುಖ್ಯ ಅತಿಥಿಗಳಾಗಿ ಮತ್ತು ಶಿರಾಲಿ ಗ್ರಾಪಂ ಅಧ್ಯಕ್ಷ ವೆಂಕಟೇಶ ನಾಯ್ಕ ಗೌರವ ಉಪಸ್ಥಿತರಿರಲಿದ್ದಾರೆ.

RELATED ARTICLES  ಸಾಣೆಕಟ್ಟಾದಲ್ಲಿ ಉಪ್ಪು ಉತ್ಪಾದನೆಯ ಕೊರತೆ.

ವೇದಿಕೆ ಕಾರ್ಯಕ್ರಮದ ನಂತರ 20ನೇ ಜಿಲ್ಲಾ ಸಮ್ಮೇಳನಾಧ್ಯಕ್ಷರಾದ ಮಾಸ್ಕೇರಿ ಎಂ.ಕೆ.ನಾಯಕ ಅವರಿಗೆ ನಿನಾದ ಸನ್ಮಾನ ನಡೆಯಲಿದೆ. ನಂತರ ಕವನ ಸ್ಪರ್ಧೇಯಲ್ಲಿ ವಿಜೇತರಾದ ಕವಿಗಳಿಂದ ಕಾವ್ಯ ವಾಚನ ನಡೆಯಲಿದೆ. ನಂತರ ಬಹುಮಾನ ವಿತರಣೆ ಮತ್ತು ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಹಾಗೂ ಸಹಗಾಯಕರುಗಳಿಂದ ನಿನಾದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ನಿನಾದದ ಸಂಚಾಲಕಿ ರೇಷ್ಮಾ ಉಮೇಶ ತಿಳಿಸಿರುತ್ತಾರೆ.

RELATED ARTICLES  ಮಹಿಳೆಯ ಗಮನ ಬೇರೆಡೆಗೆ ಸೆಳೆದು ನಗ- ನಗದು ಕಳ್ಳತನ