ಕಾರವಾರ : ನಿಧಿಗಾಗಿ ಬಾವಿ ತೋಡುವುದು ಹಾಗೂ ಅನ್ಯ ಮಾರ್ಗಗಳನ್ನು ಅನುಸರಿಸಿ ನಿಧಿ ಆಶೋಧಕ್ಕೆ ಜನತೆ ಮುಂದಾಗುತ್ತಿರುವುದು ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಆದರೆ ಇಲ್ಲೊಂದು ವಿಶೇಷ ಪ್ರಕರಣ ವರದಿಯಾಗಿದ್ದು ಘಟನೆ ಬಗ್ಗೆ ಕೇಳಿದ ಅಧಿಕಾರಿಗಳು ದಂಗಾದ ಘಟನೆ ವರದಿಯಾಗಿದೆ. ಬಾವಿ ತೋಡಿ ತನಗೆ ಅಭಿಷೇಕ ಮಾಡಬೇಕೆಂದು ಮಾರಿಕಾಂಬೆ ಹೇಳಿದ ಕಾರಣ ಬಾವಿ ತೋಡಿದ್ದೇನೆಂಬ ಉತ್ತರ ಬಂದಿರುವ ವಿಶೇಷ ಘಟನೆ ಇದು.

ಶಿರಸಿ ಮಾರಿಕಾಂಬೆ ಕನಸಿನಲ್ಲಿ ಬಂದು ಹೇಳಿದ್ದಾಳೆಂದು ಅರಣ್ಯದಲ್ಲಿ ಬಾವಿ ತೆಗೆದಿದ್ದ ನಾಲ್ವರನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ರಾಣೆಬೆನ್ನೂರು ಮೂಲದ, ಹಾಲಿ ಶಿರವಾಡ ನಿವಾಸಿ ಹಿದಾಯತ್ ಅಬ್ದುಲ್ ಘನಿ, ರಸ್ತುಂ ರಜಾಕ್ ಸಾಬ್, ಹರ್ಷದ್ ಅಲಿ ಅನ್ಸಾರಿ ಹಾಗೂ ಸರ್ಫರಾಜ್ ಅಬೀಬುಲ್ಲಾ ಸಲ್ಮಾನಿ ಬಂಧಿತರು.

RELATED ARTICLES  ನಕಲಿ ಖಾತೆಗಳಿರುವುದು ಫೇಸ್ ಬುಕ್ ಗೂ ಗೊತ್ತು! ಹುಷಾರ್

ಮೂರ್ನಾಲ್ಕು ಮಂದಿ ಕಾರವಾರ ತಾಲೂಕಿನ ಬೇಳೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಬಾವಿ ತೋಡುತ್ತಿದ್ದಾರೆಂಬ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ತೆರಳಿದ ಅರಣ್ಯಾಧಿಕಾರಿಗಳು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸುಮಾರು 15 ಅಡಿಯಷ್ಟು ಬಾವಿ ತೆಗೆದಿದ್ದು, ಬಾವಿಯ ಮೇಲ್ಬಾಗದಲ್ಲಿ ಕಲ್ಲುಗಳಿಗೆ ಕುಂಕುಮ- ಹೂವುಗಳನ್ನ ಇರಿಸಿ ಪೂಜೆ ಸಲ್ಲಿಸಿರುವುದೂ ಕಂಡುಬಂದಿದೆ. ನಾಲ್ವರನ್ನೂ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು, ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಪ್ರಕರಣದ ಪ್ರಮುಖ ಆರೋಪಿ ಹಿದಾಯತ್ ನನ್ನ ಅರಣ್ಯಾಧಿಕಾರಿಗಳು ಕೇಳಿದ್ರೆ, ಶಿರಸಿ ಮಾರಿಯಮ್ಮ ಕನಸಲ್ಲಿ ಬಂದು ಇಲ್ಲಿ ಬಾವಿ ತೆಗೆದು, ಈ ಬಾವಿಯ ನೀರಿನಿಂದ ಅಭಿಷೇಕ ಮಾಡಲು ತಿಳಿಸಿದ್ದಳು. ಹೀಗಾಗಿ ಬಾವಿ ತೆಗೆದಿದ್ದೇವೆ, ನಾವೇನೂ ತಪ್ಪು ಮಾಡಿಲ್ಲ ಎನ್ನುತ್ತಿದ್ದಾನೆ.

RELATED ARTICLES  ಕಾಂತಾರ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಕಾಂತಾರ ೨ ಬರ್ತಿದೆ.

ಆದರೆ ನಿಧಿ ಆಸೆಗಾಗಿಯೇ ಬಾವಿ ತೆಗೆದಿರುವುದಾಗಿ ಅರಣ್ಯಾಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದೆ. ಸದ್ಯ ನಾಲ್ವರನ್ನ ವಶಕ್ಕೆ ಪಡೆದಿರುವ ಅರಣ್ಯಾಧಿಕಾರಿಗಳು, ಬಾವಿ ತೆಗೆಯಲು ಬಳಸಿದ್ದ ಹಾರೆ, ಪಿಕಾಸು, ಹಗ್ಗ ಇತ್ಯಾದಿ ಸಲಕರಣೆಗಳನ್ನ ಜಪ್ತಿಪಡಿಸಿಕೊಂಡಿದ್ದಾರೆ. ಜೊತೆಗೆ ಇವ್ರ
ಹಿಂದೆ ಯಾರಿದ್ದಾರೆಂಬ ಬಗ್ಗೆಯೂ ತನಿಖೆ ಮುಂದುವರಿಸಿದ್ದಾರೆ.