ಅಂಕೋಲಾ : ಸರಕಾರಿ ಪ್ರೌಢಶಾಲೆ ಹಿಲ್ಲೂರಿನ ನಿಶಾ ರಾಜು ನಾಯ್ಕ ಇವಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಹಾಗೂ 10 ವಿದ್ಯಾರ್ಥಿಗಳು ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರಾಮಚಂದ್ರ ಹೊಸಬು ಗೌಡ, ಹರ್ಡಲ್ಸನಲ್ಲಿ ಪ್ರಥಮ, ರಾಧಾಕೃಷ್ಣ ಹರಿಕಾಂತ, ನಡಿಗೆಯಲ್ಲಿ ಪ್ರಥಮ, ವಿಶ್ವನಾಥ ಪಾಟಿಲ್ 800ಮಿಟರ್ ಓಟದಲ್ಲಿ ದ್ವೀತಿಯ,ವನಿತಾ ಪಟಗಾರ ಹರ್ಡಲ್ಸನಲ್ಲಿ ಪ್ರಥಮ,ಸೌಜನ್ಯ ನಾಯ್ಕ 800ಮಿಟರ್ ಓಟದಲ್ಲಿ ದ್ವೀತಿಯ, ಸಚಿನ್ ಹರಿಕಾಂತ, ಪ್ರಜ್ಞಾ ಹರಿಕಾಂತ ಶಿಲ್ಪಾ ನಾಯ್ಕಯೋಗಾಸನದಲ್ಲಿ ಬಹುಮಾನ ಪಡೆದು ಹಾಗೂ ನಿಶಾ ರಾಜು ನಾಯ್ಕ ಮತ್ತು ಸುಶ್ಮಿತಾ ಖಂಡೇಕರ್‍ಚಸ್ ಸ್ಫರ್ಧೆಯಲ್ಲಿ ಬಹುಮಾನ ಪಡೆದುಜಿಲ್ಲಾ ಮಟಕ್ಕೆಆಯ್ಕೆಯಾಗಿದ್ದಾರೆ, ಈ ಎಲ್ಲ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕಿಯರಾದ ಸ್ವೇತಾ ಹರಿಕಾಂತ ಅವರು ಮಾರ್ಗದರ್ಶನ ಮಾಡಿರುತ್ತಾರೆ.

RELATED ARTICLES  ವಿಶೇಷವಾಗಿ ಮಕ್ಕಳಿಗೆ ಯಕ್ಷಗಾನದ ಕುರಿತು ಆಸಕ್ತಿಮೂಡಿಸುವದಕ್ಕೆ ಸಮಾಜ ಮುಂದಾಗಬೇಕು:ಗೋಡೆ ನಾರಾಯಣ ಹೆಗಡೆ

ಮುಖ್ಯ ಶಿಕ್ಷಕರು, ಶಾಲಾ ಶಿಕ್ಷಕ ವೃಂದ,ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು ಹಾಗೂ ಪಾಲಕರು ವಿದ್ಯಾರ್ಥಿಗಳ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.