ಕಾರವಾರ ತಾಲೂಕಿನ ಮಾಜಾಳಿ ಕಡಲತೀರದಲ್ಲಿ ಆಲಿವ್ ರಿಡ್ಲೆ ಕಡಲಾಮೆ 129 ಮೊಟ್ಟೆಗಳನ್ನ ಇಟ್ಟಿದ್ದು, ಮೀನುಗಾರರ ಸಹಕಾರದಲ್ಲಿ ಅರಣ್ಯಾಧಿಕಾರಿಗಳು ಸಂರಕ್ಷಣೆ ಮಾಡಿದ್ದಾರೆ. ಕಡಲಾಮೆಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನುಭಂದ 1ರಲ್ಲಿ ಸಂರಕ್ಷಿಸಲ್ಪಟ್ಟಿವೆ. ಕಡಲಾಮೆಗಳು ನವೆಂಬರ್‌ನಿಂದ ಮಾರ್ಚ ವರೆಗೆ ಮೊಟ್ಟೆ ಇಡುವ ಕಾಲವಾಗಿದ್ದು, ಮೊಟ್ಟೆಗಳಿಂದ 50- 60 ದಿನದ ನಂತರ ಮರಿಗಳಾಗಿ ಹೊರಬರುತ್ತವೆ.

RELATED ARTICLES  ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು.

ಹೀಗಾಗಿ ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ್ ಕೆ.ಸಿ.ಅವರ ಮಾರ್ಗದರ್ಶನದಲ್ಲಿ ಅರಣ್ಯಾಧಿಕಾರಿಗಳು ಒಟ್ಟು 129 ಮೊಟ್ಟೆಗಳನ್ನು ತೀರದಲ್ಲಿ ಸಂರಕ್ಷಿಸಿ ಇಡಲಾಗಿದೆ. ಕಾರವಾರ ತಾಲೂಕು ದೇವಭಾಗ್, ಮಜಾಳಿ ಮತ್ತು ಅಂಕೋಲಾದ ಭಾವಿಕೇರಿ ಕಡಲತೀರ ಕಡಲಾಮೆ ಮೊಟ್ಟೆ ಇಡುವ ಪ್ರದೇಶಗಳಾಗಿ ಗುರುತಿಸಿಕೊಂಡಿವೆ.ಅರಣ್ಯ ಇಲಾಖೆಯ ಸಮುದ್ರ ಜೀವಿಗಳ ಸಂರಕ್ಷಣೆಗಾಗಿ ಕಳೆದ ಸಾಲಿನಿಂದ ಕೋಸ್ಟಲ್ ಆ್ಯಂಡ್ ಮರೈನ್ ಇಕೋಸಿಸ್ಟೆಮ್ ಸೆಲ್ ಕಾರ್ಯನಿರ್ವಹಿಸುತ್ತಿದ್ದು, ಕಳೆದ ವರ್ಷ 1500ಕ್ಕೂ ಅಧಿಕ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸಿ ಸುಮಾರು 1300 ಮರಿಗಳನ್ನು ಯಶಸ್ವಿಯಾಗಿ ಸಮುದ್ರಕ್ಕೆ ಬಿಡಲಾಗಿತ್ತು.

RELATED ARTICLES  ಹೊನ್ನಾವರ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆ ಸಂಪನ್ನ