ಹೊನ್ನಾವರ : ಆನ್ಲೈನ್ ಜಾಲ ಅದೆಷ್ಟು ವ್ಯಾಪಿಸಿದೆ ಎಂದರೆ ಎಲ್ಲಿಯೋ ಕೂತು ಇನ್ಯಾವುದೋ ಪ್ರಕರಣದಲ್ಲಿ ಭಾಗವಹಿಸುವ ಕತರ್ನಾಕ್ ಅಸಾಮಿಗಳು ನಮ್ಮ ಜೊತೆಗೆ ಇದ್ದಾರೆ ಎಂದೆನಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ವಿವಾಹಿತ ಮಹಿಳೆಯೊಬ್ಬಳ ಖಾಸಗಿ ಫೋಟೋವನ್ನು ಎಡಿಟ್ ಮಾಡಿ, ಆಕೆಯ ಮೊಬೈಲ್‌ನಿಂದಲೇ ಆಕೆಯ ಸ್ನೇಹತರಿಗೆ ಕಳುಹಸಿ, ಮಹಿಳೆಯ ತೋಜೋವಧೆಗೆ ಕಾರಣವಾಗಿದ್ದ ಹ್ಯಾಕರ್ ಅನ್ನು ಹರಿಯಾಣ ಪೊಲೀಸರು ಕಾರ್ಯಾಚರಣೆ ನಡೆಸಿ, ಬಂಧಿಸಿದ್ದಾರೆ. ಎಥಿಕಲ್ ಹ್ಯಾಕರ್ ಆಗಿದ್ದ ಎನ್ನಲಾಗಿದ್ದ ಈತ ಬೆಂಗಳೂರಿನ ಖಾಸಗಿ ಕಂಪನಿಯೊoದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ವರ್ಕ್ ಪಾರ್ ಹೋಮ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಆದರೆ ಹೆಚ್ಚಿನ ಸಮಯವನ್ನು ಚಂದಾವರದಲ್ಲೇ ಕುಳಿತು ಆನ್‌ಲೈನ್ ನಿಯಂತ್ರಣ ಮಾಡುತ್ತಿದ್ದ. ಆನ್‌ಲೈನ್ ಮೂಲಕ ಈತ ಏನು ಬೇಕಾದರೂ ಹ್ಯಾಕ್ ಮಾಡುವ ಕಲೆಯನ್ನು ಕರಗತಗೊಳಿಸಿಕೊಂಡಿದ್ದ ಎನ್ನಲಾಗಿದೆ. ತಾಲೂಕಿನ ಚಂದಾವರದ ಸೈಬರ್ ಗೈಡ್ ಇಮಾದ್ ಮುಲ್ಲಾ ಬಂಧಿತ ಆರೋಪಿ.

RELATED ARTICLES  ಚಿಲುಮೆ ಕೆರೆಯಲ್ಲಿ ವ್ಯಕ್ತಿಯೊರ್ವನ ಶವ ಪತ್ತೆ.

ಹರಿಯಾಣದ ಶ್ರೀಮಂತ ಮಹಿಳೆಯೋರ್ವಳ ನಗ್ನ ಚಿತ್ರವನ್ನು ಅವರ ಕಾಲ್ ಹಿಸ್ಟರಿಯಲ್ಲಿರುವ ಎಲ್ಲರಿಗೂ ಕಳುಹಿಸಿ ಆಗಾಗ ಮಾನ ಹಾನಿ ಮಾಡುತ್ತಿದ್ದ. ಈ ಕುರಿತು ಹರಿಯಾಣದಲ್ಲಿ ಸೈಬರ್ ಪ್ರಕರಣ ದಾಖಲಾಗಿತ್ತು., ತನಿಖೆ ನಡೆಸಿದ ಹರಿಯಾಣ ಪೋಲಿಸರು, ಹೊನ್ನಾವರದ ಪೋಲಿಸರ ಸಹಾಯ ಪಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೇರೆಯವರ ಮಾನ ಹರಾಜು ಮಾಡಲು ಈತನು ಗಂಟೆಗೆ 50 ಸಾವಿರ ರು. ಪಡೆಯುತ್ತಿದ್ದ ಎನ್ನಲಾಗಿದೆ. ಈತ ಬಳಿ 28 ಲಕ್ಷದ ಬಿ.ಎಂ. ಡಬ್ಲ್ಯು ಕಾರು, 24 ಲಕ್ಷದ ಬಿ.ಎಂ.ಡಬ್ಲ್ಯು ಬೈಕ್, ಇನ್ನೂ ಕೆಲವು ಬೈಕ್ ಗಳು ಇವೆ. ಸಣ್ಣದಾದ ಕಂಪನಿಯೊoದರಲ್ಲಿ ಕೆಲಸದಲ್ಲಿರುವ ಈತ ಐಶಾರಾಮಿ ಜೀವನವನ್ನು ಸಾಗಿಸುತ್ತಿರುವುದು ಎಲ್ಲರ ಗಮನಕ್ಕೆ ಇದ್ದವು.

RELATED ARTICLES  ವಿವಾಹಿತ ಯುವಕ ನೇಣಿಗೆ ಶರಣಾದ

ಈತನಿಗೆ ಯಾರಾದದರೂ ಫೋನ್ ನಂಬರ್ ನೀಡಿದರೆ ಸಾಕು ಅವರ ಜಾತಕವನ್ನೇ ತೆಗೆದಿಡುತ್ತಿದ್ದನಂತೆ. ಅವರು ಯಾರ ಜೊತೆಗೆ ಮಾತನಾಡಿದ್ದಾರೆ. ಯಾರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರ ಕಾಲ್ ಹಿಸ್ಟಿರಿ ಎಲ್ಲವನ್ನೂ ತೆಗೆದಿಡುತ್ತಿದ್ದನಂತೆ. ಅಲ್ಲದೆ, ಫೋಟೋ ನೀಡಿದರೆ, ಅವರ ಮುಖವನ್ನು ಬೆತ್ತಲು ದೇಹಕ್ಕೆ ಜೋಡಿಸುತ್ತಿದ್ದ ಎಂಬ ಆರೋಪವೂ ಇದೆ. ಅಲ್ಲದೆ, ಅವರ ಮೊಬೈಲ್ ನಂಬರ್‌ನಿಂದಲೇ ಸ್ನೇಹತರೆಲ್ಲರಿಗೂ ಹ್ಯಾಕ್ ಮಾಡಿ ಫೋಟೋ, ವಿಡಿಯೋವನ್ನು ಶೇರ್ ಮಾಡುತ್ತಿದ್ದನಂತೆ.