ಭಟ್ಕಳ : ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಸಾಗರ ರಸ್ತೆಯ ಕಡವಿನಕಟ್ಟೆ ಕ್ರಾಸ್ ಸಮೀಪ ನಡೆದಿದೆ. ಆಟೋ ಚಾಲಕ ಜಟ್ಟಾ ನಾಯ್ಕ ಮತ್ತು ಪ್ರಯಾಣಿಕರಾದ ಜಯಂತಿ ಪೈ ಹೊನ್ನಾವರ ಬಳಕೂರು ನಿವಾಸಿ ಇವರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಇನ್ನುಳಿದ ಸತೀಶ್ ರಾಮಚಂದ್ರ ಹುನ್ಸಾಡ್ಕರ್, ಸೌಮ್ಯ ಸತೀಶ್ ಹುನ್ಸಾಡ್ಕರ್, ಹಳಿಯಾಳ ನಿವಾಸಿಗಳಾಗಿದ್ದು ,ಮಹಾಲಕ್ಷ್ಮೀ ಕಿಣಿ ಹಲ್ಯಾಣಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇವರು ಆಟೋದಲ್ಲಿ ಭಟ್ಕಳ ಕಡೆಯಿಂದ ಹಲ್ಯಾಣಿ ಕಡೆಗೆ ಹೋಗುತ್ತದ್ದ ವೇಳೆ ಸಾಗರ ರಸ್ತೆಯಲಿರುವ ಬಸ್ ಡಿಪೋದಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಬಸ್ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಗಾಯಾಳುಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಣಿಪಾಲ್ ಮತ್ತು ಉಡುಪಿ ಖಾಸಗಿ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಅಪಘಾತ ಸ್ಥಳಕ್ಕೆ ಭಟ್ಕಳ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES  ಚಿನ್ನದ ಅತಿಚಿಕ್ಕ ಚರಕ ಹಾಗೂ ಗಾಂಧೀಜಿ ಪ್ರತಿಮೆ ತಯಾರಿಸಿದ ಹೊನ್ನಾವರದ ಪ್ರತಿಭೆ.

ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಅಧಿಕಾರಿಗಳು ಹಾಗೂ ಸ್ಥಳೀಯರು ಹರಸಾಹಸಪಟ್ಟು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES  ಗಾಣಿಗ ಯುವ ಬಳಗ ಕುಮಟಾ ವತಿಯಿಂದ ಅಗತ್ಯ ಕಿಟ್ ವಿತರಣೆ -