ಅಂಕೋಲಾ : ಡಿಸೆಂಬರ್ ಬಂತಂದರೆ ಸಾಕು, ಪ್ರವಾಸಕ್ಕೆ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತದೆ. ಆದರೆ ಅಪಾಯ ತಂದುಕೊಳ್ಳುವವರ ಸಂಖ್ಯೆಯೂ ಕಡಿಮೆಯೇನಲ್ಲ. ಪ್ರವಾಸಕ್ಕೆಂದು ಗೆಂದು ಸಹಪಾಠಿಗಳ ಜೊತೆ ಬಂದಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯೋರ್ವ ಗಂಗಾವಳಿ ನದಿಯಲ್ಲಿ ಕಣ್ಮರೆಯಾಗಿರುವ ಘಟನೆಯೊಂದು ಇದೀಗ ಎಲ್ಲೆಡೆ ವೈರಲ್ ಆಗಿದೆ. ಯಲ್ಲಾಪುರದ ತೆಂಕನಗೇರಿಯ ಪ್ರಕಾಶ್ ವಿಟ್ಟು ಪಟ್ಕರೆ (16) ನೀರಿನಲ್ಲಿ ಕಣ್ಮರೆಯಾದ ದುದೈವಿ ಬಾಲಕ ಎನ್ನಲಾಗಿದೆ.

RELATED ARTICLES  ಚಿತ್ರಿಗಿ ಪ್ರೌಢಶಾಲೆ: ಎನ್.ಎಂ.ಎಂ.ಎಸ್.ವಿದ್ಯಾರ್ಥಿವೇತನಕ್ಕೆ ಆಯ್ಕೆ.

ಗುಳ್ಳಾಪುರದ ಹೈಸ್ಕೂಲ್ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಉದ್ದೇಶದಿಂದ ಶಾಲೆಯವರು ಮಕ್ಕಳನ್ನು ಹತ್ತಿರದ ಗಂಗಾವಳಿ ನದಿ ತೀರದ ಬಳಿ ಕರೆತಂದಿದ್ದು, ಕೆಲ ಹೊತ್ತಿನಲ್ಲೇ ವಿದ್ಯಾರ್ಥಿಯೋರ್ವ ಅದಾವುರೋ ಕಾರಣದಿಂದ ಗುಂಪಿನಿಂದ ಬೇರ್ಪಟ್ಟು ನದಿ ತೀರದ ಬಳಿ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರುವ ಬಗ್ಗೆ ಸ್ಥಳೀಯ ಅಭಿಪ್ರಾಯ ವ್ಯಕ್ತವಾಗಿದೆ. ಸ್ಥಳದಲ್ಲಿ ಆತಂಕದ ವಾತಾವರಣ ಕಂಡು ಬರುತ್ತಿದ್ದು, ಘಟನೆ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ .

RELATED ARTICLES  ಕೊಂಕಣದಲ್ಲಿ ಯಶಸ್ವಿಯಾಗಿ ಜರುಗಿದ ೨೦೨೩ ನೇ ಸಾಲಿನ ವಿಧಾತ್ರಿ ಅವಾರ್ಡ ಕಾರ್ಯಕ್ರಮ.

ಈತ ಹಾಸ್ಟೆಲ್ ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನಲಾಗಿದ್ದು, ಸ್ಥಳೀಯ ಮೀನುಗಾರರು , ಅಗ್ನಿ ಶಾಮಕದಳದವರು ಬಾಲಕನ ಪತ್ತೆಗೆ ಮುಂದಾಗಿದ್ದಾರೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು ಶೋಧ ಕಾರ್ಯಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ.