ಕುಮಟಾ: ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ವಾಲ್ಮೀಕಿ ಜಯಂತಿಯನ್ನು ವಿಶಿಷ್ಠವಾಗಿ ಆಚರಿಸಲಾಯಿತು. ವಾಲ್ಮೀಕಿಯ ಜೀವನ ಚರಿತ್ರೆಯ ವಿಡಿಯೋವನ್ನು ಪ್ರೊಜೆಕ್ಟರ್ ಮೂಲಕ ವೀಕ್ಷಿಸಿ ವಿದ್ಯಾರ್ಥಿಗಳು ರಾಮಾಯಣ ಗ್ರಂಥ ಕರ್ತನ ಬಗ್ಗೆ ಅರಿತು ಬೆರಗಾದರು.

RELATED ARTICLES  ಕಾಡಿಗೆ ತೆರಳಿದಾತ ಹೆಣವಾಗಿ ಮರಳಿದ..!

ಮುಖ್ಯ ಶಿಕ್ಷಕ ಎನ್.ಆರ್.ಗಜು ಕಾವ್ಯವೆಂಬ ಮರದ ಮೇಲೆ ಕುಳಿತು, ರಾಮ ರಾಮಾ ಎಂದು ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ನಮಸ್ಕರಿಸೋಣ ಈ ದಿನ ಎಂದರು. ಹಿರಿಯ ಶಿಕ್ಷಕರಾದ ವಿ.ಎನ್.ಭಟ್ಟ ವಾಲ್ಮೀಕಿ ರಾಮಾಯಣ ರಚಿತವಾಗುವಲ್ಲಿ ಪ್ರಚುರದಲ್ಲಿದ್ದ ಅನೇಕ ದಂತಕತೆಗಳನ್ನು ತಿಳಿಸಿದರು. ಶಿಕ್ಷಕ ಎಲ್.ಎನ್.ಅಂಬಿಗ ಸ್ವಾಗಿಸಿದರು. ಶಿಕ್ಷಕ ಪ್ರದೀಪ ನಾಯಕ ವಂದಿಸಿದರು. ವಿದ್ಯಾರ್ಥಿ ಪ್ರಣೀತ ಕಡ್ಲೆ ನಿರ್ವಹಿಸಿದರು.

RELATED ARTICLES  ಕೆಲಸ ಮುಗಿಸಿ ಬರುವಾಗ ಕಾಲುಜಾರಿ ಬಾವಿಗೆ ಬಿದ್ದು ಯುವತಿ ಸಾವು