ಶ್ರೀಮತಿ ಜಯಾ ಶಾನಭಾಗ ಇವರು ಕುಮಟಾದ ಹೆಸರಾಂತ ಕೊಂಕಣ ಶಿಕ್ಷಣ ಸಂಸ್ಥೆಯ ಬಾಲಮಂದಿರದ ಹೆಮ್ಮೆಯ ಶಿಕ್ಷಕಿ.
ಎಲ್ಲರ ಬಾಯಲ್ಲಿ ಜಯಾ ಮಿಸ್ ಎಂದೇ ಪ್ರಸಿದ್ಧರಾಗಿರುವ ಇವರು ಪಾದರಸದಂತ ಚುರುಕಿನ ವ್ಯಕ್ತಿತ್ವದವರು.ಸದಾ ಲವಲವಿಕೆಯಿಂದ ಇರುವ ಇವರು ಮಗುವಿನಂತೇ ಮಗ್ಧಮನಸಿನವರು. ತನ್ನ ವಿದ್ಯಾರ್ಥಿಗಳು ಎಂದರೆ ಇವರಿಗೆ ಪಂಚಪ್ರಾಣ ! ಉಳಿದವರ್ಯಾರೂ ಈ ವಿಷಯದಲ್ಲಿ ಅಪಸ್ವರ ಎತ್ತಿದರೆ ಮಕ್ಕಳ ಪರವಾಗಿ ಅಬ್ಬರಿಸುವ ಇವರು ಯಾವುದೇ ಮುಲಾಜಿಗೆ ಒಳಗಾಗುವ ವ್ಯಕ್ತಿತ್ವದವರಲ್ಲ.
ರಾಷ್ಟಭಕ್ತಿ ರಾಷ್ಟ್ರಪ್ರೇಮ ಆಧ್ಯಾತ್ಮಿಕತೆಯೇ ಇವರ ಹೆಗ್ಗುರುತು.ಕೌಟುಂಬಿಕ ಒತ್ತಡ ಅನಾರೋಗ್ಯ ಇವಾವುದನ್ನೂ ಗಮನಿಸದೇ ಸದಾ ದೇಶಸೇವೆ ,ಧಾರ್ಮಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವವರು.
ಕುಮಟಾದ ಯುಗಾದಿ ಉತ್ಸವ,ಗೀತಾ ಜಯಂತಿ ಮೊದಲಾದ ಕಾರ್ಯಕ್ರಮಗಳಲ್ಲಿ ಜಯಾ ಮೇಡಂ ಅವರ ಸಕ್ರೀಯ ಭಾಗವಹಿಸುವಿಕೆ ಇದ್ದೇ ಇರುತ್ತದೆ.ನೂರಾರು ಪುಟಾಣಿಗಳಿಗೆ ರಾಮಾಯಣ ಮಹಾಭಾರತ,ಭಗವದ್ಗೀತೆ, ಕೃಷ್ಣ ಲೀಲೆ, ಮೊದಲಾದ ಪೌರಾಣಿಕ ರೂಪಕ ,ನಾಟಕ ,ನೃತ್ಯಗಳನ್ನು ಕಲಿಸಿ ಅವರನ್ನು ತರಬೇತುಗೊಳಿಸಿ ಜಿಲ್ಲೆಯಾದ್ಯಂತ ಪ್ರದರ್ಶನ ನೀಡಿರುವ ಖ್ಯಾತಿ ಇವರದ್ದು, ಇವರ ಗರಡಿಯ ಮಕ್ಕಳು ಅರಳು ಹುರಿದಂತೆ ಹಾಡುತ್ತಾರೆ,ಕುಣಿಯುತ್ತಾರೆ.ಹಲವಾರು ಶ್ಲೋಕಗಳ ಗಣಿಯಾದ ಇವರು ದಣಿವಿಲ್ಲದ ದುಡಿಮೆಯವರು .ರಾಷ್ಟ್ರಸೇವಿಕಾ ಸಂಘದ ಸೇವಾಕರ್ತೆಯಾಗಿರುವ ಇವರ ರಕ್ತದ ಕಣಕಣದಲ್ಲಿ ದೇಶಭಕ್ತಿ ತುಂಬಿತುಳುಕುತ್ತಿದೆ. ಅನಾರೋಗ್ಯ ,ವಯೋಸಹಜ ಬಳಲಿಕೆಗೂ ಕ್ಯಾರೇ ಅನ್ನದ ಇವರು ತಮ್ಮ ವಿದ್ಯಾರ್ಥಿಗಳಲ್ಲೂ ಅಂತಹುದೇ ಸಂಚಲನ ಸೃಷ್ಟಿ ಮಾಡಬಲ್ಲರು.
ಮೊನ್ನೆಯಷ್ಟೇ ಇವರು ಪುಟಾಣಿಗಳನ್ನು ಚಂದಾವರ ಹನುಮಂತ ದೇಗುಲ ಹಾಗೂ ಹೊಸಾಡ ಗೋಶಾಲೆಯ ಪ್ರವಾಸಕ್ಕೆ ಕರೆದುಕೊಂಡು ಹೋದ ವೇಳೆ ಮಕ್ಕಳನ್ನು ಹುರುದುಂಬಿಸಲು ಹಾಕಿದ ಘೋಷಣೆಗಳು ಹಾಗೂ ಅವುಗಳಿಗೆ ಚಿಣ್ಣರ ಉತ್ಸಾಹದ ಪ್ರತಿಕ್ರಿಯೆಗಳ ವಿಡಿಯೋ ಅಂತರ್ಜಾಲದಲ್ಲಿ ಭಾರೀ ಸುದ್ದಿಯಲ್ಲಿದೆ….
ಇದನ್ನು ನೋಡಿ ದೇಶದ ಹಲವು ಕಡೆಗಳಿಂದ ಸಂಸ್ಥೆಯ ಬಗ್ಗೆ ಹಾಗೂ ಶಿಕ್ಷಕಿಯರ ಬಗ್ಗೆ ಮೆಚ್ಚುಗೆಯ ಪ್ರತಿಕ್ರಿಗಳು ಹರಿದು ಬರುತ್ತಲಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ
ರಾತ್ರಿ ಬೆಳಗಾಗುವುದರ ಒಳಗೆ ನಮ್ಮ ಜಯಾ ಮಿಸ್ ಸುಪ್ಪರ್ ಸ್ಟಾರ್ ಆಗಿದ್ದಾರೆ. ಅವರಿಗೆ ಅಭಿನಂದನೆಗಳು….
ನಮಸ್ಕಾರ…..
✍️ಕಾಗಾಲ ಚಿದಾನಂದ ಭಂಡಾರಿ.
ವಿಡಿಯೋ..