ದಾಂಡೇಲಿ : ನಗರ ಸಭೆಯ ಆಶ್ರಯದಲ್ಲಿ ನಗರ ಸಭೆಯ ಸಭಾಭವನದಲ್ಲಿ ಗುರುವಾರ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ನಗರ ಸಭೆಯ ಅಧ್ಯಕ್ಷ ಎನ್.ಜಿ.ಸಾಳುಂಕೆಯವರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆರತಿ ಬೆಳಗಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕನ್ಯಾ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಹನುಮಂತ ಕುಂಬಾರ ಅವರು ಈ ರಾಷ್ಟ್ರ ಕಂಡ ಸರ್ವಶ್ರೇಷ್ಟ ವ್ಯಕ್ತಿಗಳಲ್ಲಿ ವಾಲ್ಮೀಕಿಯವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಕನ್ನಡ ನಾಡಿಗೆ ಪಂಪ ಆದಿಕವಿಯಾದವರೆ ಇಡೀ ರಾಷ್ಟ್ರಕ್ಕೆ ವಾಲ್ಮೀಕಿ ಆದಿಕವಿಯಾಗಿದ್ದಾರೆ. ರಾಮಾಯಣ ಮಹಾಕಾವ್ಯದ ಮೂಲಕ ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ವಿರಾಜಮಾನರಾಗಿರುವ ವಾಲ್ಮೀಕಿಯವರ ಬದ್ದತೆ ಮತ್ತು ಶೃದ್ದೆ ಅನುಕರಣೀಯ. ಸೃಜನಾತ್ಮಕ ಚಟುವಟಿಕೆಗಳ ಮೂಲಕ ಬದುಕನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಮಹರ್ಷಿ ವಾಲ್ಮೀಕಿಯವರ ಜೀವನಾದರ್ಶ ಅನುಕರಣೀಯ ಎಂದರು.

RELATED ARTICLES  ಹಟಾತ್ತಾಗಿ ಕುಸಿದುಬಿದ್ದು ಕೊನೆಯುಸಿರೆಳೆದ ವಕೀಲ..!

ನಗರ ಸಭಾ ಅಧ್ಯಕ್ಷ ಎನ್.ಸಿ.ಸಾಳುಂಕೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ ಮುಂಗರವಾಡಿ, ನಗರ ಸಭಾ ಸದಸ್ಯರುಗಳಾದ ರಿಯಾಜ ಶೇಖ, ರವಿ ಸುತಾರ್, ರೋಶನ್ ಬಾವಾಜಿ, ರಾಮಲಿಂಗ ಜಾಧವ, ಸುಶೀಲ ಕಾಸರಕೋಡ, ನಮೀತಾ ಹಳದನಕರ, ರುದ್ರಮ್ಮಾ ಬಿರಾದಾರ, ಸುಲೋಚನಾ ಸುರನಾಯ್ಕ, ನಗರ ಸಭೆಯ ಅಧಿಕಾರಿಗಳಾದ ಕುಲಕರ್ಣಿ, ಬಾಲು ಗವಾಸ, ಮೈಕಲ್ ಫರ್ನಾಂಡೀಸ್, ಪ್ರೆಸಿಲ್ಲಾ, ಕರಣ್ ಜೋಶಿ, ಹಾಗೂ ಇನ್ನಿತರ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES  ಗುಡ್ಡ ಕುಸಿದ ಪರಿಣಾಮ ಪ್ರಾಣ ಹಾನಿ.

ನಿವೃತ್ತ ನಗರ ಸಭೆಯ ಅಧಿಕಾರಿ ಸತೀಶ ಗೋಸಾವಿ ಕಾರ್ಯಕ್ರಮ ನಿರೂಪಿಸಿದರು.