ಕಾರವಾರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಉತ್ತರಕನ್ನಡ ವಿಭಾಗದ ಕುಮಟಾ ಘಟಕದಿಂದ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಒಂದು ದಿನದ ವಿಶೇಷ ಪ್ಯಾಕೇಜ್ ಟೂರ್‌ನ್ನು ವಯಸ್ಕರಿಗೆ ರೂ.300, ಮಕ್ಕಳಿಗೆ ರೂ.250ಗಳ ರಿಯಾಯಿತಿ ದರದಲ್ಲಿ ಪ್ರಾರಂಭಿಸಲಾಗಿದೆ.
ಈ ವಿಶೇಷ ವಾಹನವು ‘ಕರಾವಳಿ ದರ್ಶನ’ ಎಂಬ ನಾಮಫಲಕದೊಂದಿಗೆ ಕುಮಟಾ ಬಸ್ ನಿಲ್ದಾಣದಿಂದ ಬೆಳಗ್ಗೆ 7:30ಕ್ಕೆ ಹೊರಟು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ, ಮಿರ್ಜಾನ ಕೋಟೆ, ಅಪ್ಸರಕೊಂಡ, ಇಡಗುಂಜಿ ಮಹಾಗಣಪತಿ ದೇವಸ್ಥಾನ, ಮುರಡೇಶ್ವರ ದೇವಸ್ಥಾನ, ಇಕೋ ಬೀಚ್ ಮತ್ತು ಶರಾವತಿ ಕಾಂಡ್ಲಾ ಮ್ಯಾಂಗ್ರೋವ್ ಬೋರ್ಡ್ ಪಾರ್ಕ್ ಈ ಎಲ್ಲ ಪ್ರವಾಸಿ ತಾಣಗಳನ್ನು ಸಂದರ್ಶಿಸಿ, ಮರಳಿ ರಾತ್ರಿ 7 ಗಂಟೆಗೆ ಗೋಕರ್ಣ ತಲಪುತ್ತದೆ. ಕೇವಲ ಒಂದು ದಿನದ ಅವಧಿಯಲ್ಲಿ 7ರಿಂದ 8 ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ.

RELATED ARTICLES  ಭಾರತೀಯ ಸೇನೆಯ ಡೆಂಟಲ್ ಕಾಫ್ರ್ಸ, ಸಣ್ಣ ಸೇವಾ ಆಯೋಗದ ಮೂಲಕ ಆಯುಕ್ತ ಹುದ್ದೆಗಳಿಗೆ ನೇಮಕಾತಿ.


ಈ ವಿಶೇಷ ಪ್ಯಾಕೆಜ್ ಟೂರ್‌ನ್ನು ಪ್ರತಿ ಶನಿವಾರ, ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳಂದು ಕುಮಟಾ ಬಸ್ ನಿಲ್ದಾಣದಿಂದ ಕಾರ್ಯಾಚರಣೆಗೊಳಿಸಲಾಗುವುದು. ಪ್ರಯಾಣಿಕರು http://www.ksrtc.inನ ಮೂಲಕ ಮುಂಗಡವಾಗಿ ತಮ್ಮ ಆಸನಗಳನ್ನು ಕಾಯ್ದಿರಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7760991726 ಗೆ ಸಂಪರ್ಕಿಸಬಹುದು ಎಂದು ವಾಕರಸಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಖಂಡಗ್ರಾಸ ಸೂರ್ಯಗ್ರಹಣ ಎಲ್ಲೆಲ್ಲಿ ಹೇಗೆ ಆಗುತ್ತಿದೆ : Live ನೋಡಿ.