ಶಿರಸಿ : ತಾಲೂಕಿನ ಕೊಡ್ನಗದ್ದೆಯಲ್ಲಿ ಪತಿ ಪತಿಯರ ನಡುವಿನ ಕಲಹ ಸಾವಿನಲ್ಲಿ ಅಂತ್ಯವಾದ ಪ್ರಕರಣ ವರದಿಯಾಗಿದೆ. ಪತಿಯೇ ಪತ್ನಿಯನ್ನು ಅನುಮಾನಿಸಿ ಆಕೆಗೆ ಮಾಸಿಕ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಹೆಂಡತಿ ಸಾವಿಗೆ ಶರಣಾದ ಘಟನೆ ಎನ್ನಲಾಗಿದೆ. ನೀನು ಬೇರೆಯವರ ಜೊತೆ ಸಂಬoಧ ಹೊಂದಿದ್ದೀಯ ಎಂದು ಪತಿ, ಪದೇ ಪದೇ ಹೇಳುತ್ತಿದ್ದರಿಂದ ಬೇಸರಗೊಂಡು ಪತ್ನಿ ಸಾವಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.

RELATED ARTICLES  ಸಾಮಾಜಿಕ ಜಾಲತಾಣ ತಂದ ಅವಾಂತರ : ಇನ್ಸ್ಟಾಗ್ರಾಮ್ ಸ್ನೇಹಿತನಿಂದ ಬೆದರಿಕೆ : ಯುವತಿ ಆತ್ಮಹತ್ಯೆ.

ಪವಿತ್ರ ಮಹೇಶ್ ಮರಾಠಿ ಆತ್ಮಹತ್ಯೆಗೆ ಶರಾಣಾದ ಮಹಿಳೆ ಎಂದು ತಿಳಿದುಬಂದಿದೆ. ಮದುವೆಯಾಗಿ ಒಂದು ವರ್ಷ ಕಳೆದಿದ್ದು, ಇತ್ತಿಚೆಗೆ ಗಂಡ, ಹೆಂಡತಿಯ ನಡತೆ ಶಂಕಿಸುತ್ತಿದ್ದು, ಇದರಿಂದ ಪವಿತ್ರ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗಿದೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED ARTICLES  ಬಾವಿಯಿಂದ ನೀರು ಸೇದುವ ಸಂದರ್ಭದಲ್ಲಿ ಮಹಿಳೆ ಬಾವಿಗೆ ಬಿದ್ದು ಸಾವು.