JOB NEWS : ಕೇಂದ್ರೀಯ ವಿದ್ಯಾಲಯ ಸಂಘಟನೆಯು 6414 ಪ್ರಾಥಮಿಕ ಶಿಕ್ಷಕರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೇಂದ್ರೀಯ ವಿದ್ಯಾಲಯ ಸಂಘಟನೆಯ ವೆಬ್ಸೈಟ್ kvsangathan.nic.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
ಒಟ್ಟು ಹುದ್ದೆಗಳ ಸಂಖ್ಯೆ- 6414
ಅರ್ಹತಾ ಮಾನದಂಡ:
ಶೈಕ್ಷಣಿಕ ಅರ್ಹತೆ- ಕನಿಷ್ಠ 50% ಅಂಕಗಳೊಂದಿಗೆ 12ನೇ ಮತ್ತು ಎರಡು ವರ್ಷಗಳ D.El.Ed ಕೋರ್ಸ್ನಲ್ಲಿ ಉತ್ತೀರ್ಣರಾಗಿರಬೇಕು. ನೀವು DLED ಬದಲಿಗೆ 4 ವರ್ಷಗಳ BLED ಮಾಡಿದರೂ ಸಹ ಅರ್ಜಿ ಸಲ್ಲಿಸಬಹುದು. ಬಿ.ಎಲ್.ಇಡಿಯಲ್ಲಿ ಶೇ.50ರಷ್ಟು ಅಂಕ ಬೇಕಿರುವುದು ಕಡ್ಡಾಯವಿಲ್ಲ. ಅಥವಾ ಕನಿಷ್ಠ 50% ಅಂಕಗಳೊಂದಿಗೆ ಪದವಿ ಪಾಸಾಗಿದ್ದರೆ, B.Ed ನಲ್ಲಿ 50% ಅಂಕ ಕಡ್ಡಾಯವಿಲ್ಲ ಎಂದು ತಿಳಿಸಲಾಗಿದೆ.
ಅಭ್ಯರ್ಥಿಗಳು CTET ಪೇಪರ್-I ನಲ್ಲಿ ಉತ್ತೀರ್ಣರಾಗಿರಬೇಕು. ಇದಲ್ಲದೇ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬೋಧನೆ ಮಾಡುವಲ್ಲಿ ಪ್ರಾವೀಣ್ಯತೆ ಇರಬೇಕು.
ಅಪೇಕ್ಷಣೀಯ ವಿದ್ಯಾರ್ಹತೆ- ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 30 ವರ್ಷಗಳು. ಎಸ್ಸಿ/ಎಸ್ಟಿಗೆ 5 ವರ್ಷ, ಒಬಿಸಿಗೆ 3 ವರ್ಷ, ಮಹಿಳೆಯರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾಥಮಿಕ ಶಿಕ್ಷಕರ ಮಾಸಿಕ ಮೂಲ ವೇತನ 35400 ರೂ. ಅದರಂತೆ 35400 ರಿಂದ 112400/ ರೂ. ವರೆಗೆ ವೇತನ ಸಿಗಲಿದೆ.
ISRO Recruitment 2022: ಇಸ್ರೋ ನೇಮಕಾತಿ: ಪದವೀಧರರು ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ:
ಈ ಹುದ್ದೆಗಳ ಅರ್ಜಿ ಶುಲ್ಕವಾಗಿ 1500 ರೂ. ಪಾವತಿಸಬೇಕಾಗುತ್ತದೆ.
ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಜನವರಿ 2, 2023