ಕುಮಟಾ: ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ- ಇದರ ಜಿಲ್ಲಾ ಮಟ್ಟದ ನೂತನ ಕಾರ್ಯಕಾರಿ ಸಮಿತಿಯ ಉದ್ಘಾಟನೆ ಜ.೧ ರಂದು ಮಧ್ಯಾಹ್ನ ೩ ಗಂಟೆಗೆ ಪಟ್ಟಣದ ವೈಭವ ಪ್ಯಾಲೇಸ್ ಸಭಾ ಭವನದಲ್ಲಿ ನಡೆಯಲಿದೆ.
ಉದ್ಘಾಟಕರಾಗಿ ಏಳು ರಾಷ್ಟçಪ್ರಶಸ್ತಿ ಪುರಸ್ಕೃತ ಚಲನಚಿತ್ರ, ಧಾರಾವಾಹಿ ನಿರ್ದೇಶಕ ಪಿ.ಶೇಷಾದ್ರಿ, ಮುಖ್ಯ ಅತಿಥಿಯಾಗಿ ಹಿರಿಯ ಕಥೆಗಾರ ಡಾ. ಶ್ರೀಧರ ಬಳಗಾರ ಅವರು ಪಾಲ್ಗೊಳ್ಳಲಿದ್ದಾರೆ. ‘ಹಣತೆ’ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅಧ್ಯಕ್ಷತೆ ವಹಿಸಲಿದ್ದಾರೆ.
ಎರಡು ದಶಕಗಳಿಂದ ಕನ್ನಡ ಪರಿಚಾರಿಕೆ ಮಾಡಿಕೊಂಡು ಬರುತ್ತಿದ್ದ ಹಣತೆ ಇದೀಗ ನೂತನ ಕಾರ್ಯಕಾರಿ ಸಮಿತಿಯೊಂದಿಗೆ ನಾಡು ನುಡಿ ಸೇವೆಗಾಗಿ ಧ್ವನಿಯಾಗಲಿದೆ. ನೂತನ ಕಾರ್ಯಕಾರಿ ಸಮಿತಿಯಲ್ಲಿ ಜಿಲ್ಲಾಧ್ಯಕ್ಷರಾಗಿ ಅರವಿಂದ ಕರ್ಕಿಕೋಡಿ, ಪ್ರಧಾನ ಸಂಚಾಲಕರಾಗಿ ಎನ್.ಜಯಚಂದ್ರನ್ ದಾಂಡೇಲಿ, ಗೌರವ ಕಾರ್ಯದರ್ಶಿಗಳಾಗಿ ನಾಗಪತಿ ಹೆಗಡೆ ಹುಳಗೋಡ, ಉದಯ ಮಡಿವಾಳ, ಗೌರವ ಕೋಶಾಧ್ಯಕ್ಷರಾಗಿ ಉಮೇಶ ಮುಂಡಳ್ಳಿ, ಸದಸ್ಯರಾಗಿ ಅಮೃತ ರಾಮರಥ ಶಿರಾಲಿ, ನಾಗರಾಜ ಹೆಗಡೆ ಅಪಗಾಲ, ಡಾ. ಶ್ರೀಧರ ಉಪ್ಪಿನಗಣಪತಿ, ಡಾ. ಪ್ರಕಾಶ ನಾಯಕ ಬೆಳಸೆ, ಎಂಟನಿ ಜಾನ್ ರಾಮನಗರ, ಗಂಗಾಧರ ಕೊಳಗಿ, ಉಪೇಂದ್ರ ಘೋರ್ಪಡೆ, ಗಣೇಶ ನಾಡೋರ, ದಾಮೋದರ ನಾಯ್ಕ ಅಂಬಾರಕೊಡ್ಲ, ಕಮಲಾ ಕೊಂಡದಕುಳಿ, ನೇಮಕಗೊಂಡಿದ್ದಾರೆ.
ತಾಲೂಕು ಘಟಕಗಳ ಅಧ್ಯಕ್ಷರಾಗಿ ಶಂಕರ ನಾಯ್ಕ ಶಿರಾಲಿ (ಭಟ್ಕಳ), ಪ್ರಶಾಂತ ಹೆಗಡೆ ಮೂಡಲಮನೆ (ಹೊನ್ನಾವರ), ಪ್ರಕಾಶ ನಾಯ್ಕ ಅಳ್ವೇದಂಡೆ (ಕುಮಟಾ), ಅಕ್ಷಯ ನಾಯ್ಕ ಬೊಬ್ರುವಾಡ (ಅಂಕೋಲಾ), ನಾಗರಾಜ ಹರಪನಹಳ್ಳಿ (ಕಾರವಾರ), ದಯಾನಂದ ದಾನಗೇರಿ (ಜೊಯಿಡಾ), ರಾಘವೇಂದ್ರ ವಿ ಗಡಪ್ಪನವರ್ (ದಾಂಡೇಲಿ), ರಾಮಕೃಷ್ಣ ಗುನಗ (ಹಳಿಯಾಳ), ವಿನಯ ನಾಗೇಶ ಪಾಲನಕರ (ಮುಂಡಗೋಡ), ರಾಘವೇಂದ್ರ ಹೊನ್ನಾವರ (ಯಲ್ಲಾಪುರ), ಉದಯ ಕಾನಳ್ಳಿ (ಶಿರಸಿ), ಸುಧಾರಾಣಿ ನಾಯ್ಕ (ಸಿದ್ದಾಪುರ) ಅವರನ್ನು ನೇಮಕ ಮಾಡಲಾಗಿದೆ.
‘ಸರ್ವರ ಬದುಕು ಬದುಕಲಿ’ ಎಂಬ ಆಶಯದೊಂದಿಗೆ ಹೊರಟ ‘ಹಣತೆ’ ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ತನ್ನದೇ ನೆಲೆಯಲ್ಲಲಿ ಈ ನೆಲದ ಅಸ್ಮಿತೆ ಉಳಿಸಿಕೊಳ್ಳಲು ಪ್ರಯತ್ನಪಡಲಿದೆ ಎಂದು ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.