ಕುಮಟಾ : ಇತ್ತೀಚೆಗೆ ಸರ್ಕಾರಿ ಪದವಿಪೂರ್ವ ಕಾಲೇಜು ಹಿರೇಗುತ್ತಿ ಕುಮಟಾ ಇಲ್ಲಿ ಹೆಸ್ಕಾಂ ಕುಮಟಾ ಹಾಗೂ ಗೋಕರ್ಣ ಶಾಖೆಯ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯುತ್ ಗ್ರಾಹಕರ ಸುರಕ್ಷತೆ ಮತ್ತು ಜಾಗೃತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಹೆಸ್ಕಾಂ ಹೊನ್ನಾವರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ವಿನೋದ್ ಭಾಗವತ ರವರು ವಿದ್ಯುತ್ ಶಕ್ತಿಗೆ ಸಂಬಂಧಿಸಿದ ಸರ್ಕಾರದ ಗ್ರಾಹಕ ಸ್ನೇಹಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯುತ್ ಸುರಕ್ಷಿತತೆಯ ಬಗ್ಗೆ ಹೆಸ್ಕಾಂನ ಕುಮಟಾದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ರಾಜೇಶ್ ಮಡಿವಾಳ ಅವರು ವಿದ್ಯುತ್ ಸುರಕ್ಷತೆಯ ಬಗ್ಗೆ ಮಾತನಾಡುತ್ತಾ ವಿದ್ಯುತ್ತನ್ನು ಮತ್ತೆ ತರಬಹುದು. ಆದರೆ ಜೀವವನ್ನು ತರಲಾಗುವುದಿಲ್ಲ. ಆದ್ದರಿಂದ ವಿದ್ಯುತ್ತಿನ ಬಗ್ಗೆ ಎಷ್ಟು ಜಾಗೃತಿ ವಹಿಸಿದರೂ ಕಡಿಮೆಯೇ ಎಂದು ವಿವರವಾಗಿ ತಿಳಿಸಿಕೊಟ್ಟರು. ವಿದ್ಯುತ್ ಬಿಲ್ಲು ಉಳಿತಾಯದ ಬಗ್ಗೆ ಸಹಾಯಕ ಲೆಕ್ಕಾಧಿಕಾರಿ ಶ್ರೀ ಲೋಹಿತ್ ನಾಯಕರವರು ಮತ್ತು ಸಿ.ಜಿ.ಆರ್‌.ಎಫ್ ಸದಸ್ಯ ಲೋಕೇಶ್ ಹೆಗಡೆಯವರು ಗ್ರಾಹಕರ ಹಕ್ಕುಗಳು ಮತ್ತು ಒಂಬುಡ್ಸ್ಮನ್ ಬಗ್ಗೆ ವಿವರವಾಗಿ ತಿಳಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಹಿರೇಗುತ್ತಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಅರುಣ್ ಹೆಗಡೆಯವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು ಹೆಸ್ಕಾಂ ಶಾಖಾಧಿಕಾರಿ ಶ್ರೀ ನಾಗರಾಜ್ ಗೌಡ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯುತ್ ಜ್ಞಾನಾಧಾರಿತ ಅಪರೂಪದ ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೆಲ್ಲರೂ ತಮ್ಮ ಅನಿಸಿಕೆಯಲ್ಲಿ ಪ್ರಶಂಶಿಸಿದರು.

RELATED ARTICLES  ನೀಟ್-2023 ರಲ್ಲಿ ಉತ್ತಮ ಸಾಧನೆಗೈದ ಸರಸ್ವತಿ ಪಿಯು ವಿದ್ಯಾರ್ಥಿಗಳು